ಕಾಸರಗೋಡು: ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯ 'ಕ್ರಿಸ್ಮಸ್-ಹೊಸವರ್ಷ' ಆಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಖಾದಿ ಮೇಳದ ಉದ್ಘಾಟನೆಯನ್ನು ಡಿ.21ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯತ್ ವಠಾರದಲ್ಲಿ ಜರುಗಲಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಎಡಿಎಂ ಎ.ಕೆ.ರಮೇಂದ್ರನ್ ಅಧ್ಯಕ್ಷತೆ ವಹಿಸುವರು. ಮೇಳದ ಮೊದಲ ಮಾರಾಟವನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ ನಿರ್ವಹಿಸಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ ಮೊದಲ ಮಾರಾಟದ ಉತ್ಪನ್ನವನ್ನು ಖರೀದಿಸುವರು. ಖಾದಿ ಉತ್ಪನ್ನಗಳಿಗೆ ಡಿಸೆಂಬರ್ 19 ರಿಂದ 2023 ಜನವರಿ 5, ರವರೆಗೆ ಶೇ. 30ರ ತನಕ ಸರ್ಕಾರ ರಿಯಾಯಿತಿಯನ್ನು ಘೋಷಿಸಿದೆ. ಮೇಳದಲ್ಲಿ ವಿವಿಧ ರೀತಿಯ ಮುಂಡುಗಳು, ರೇಷ್ಮೆ ಕಾಟನ್ ಮಸ್ಲಿನ್ ಸೀರೆಗಳು, ಚೂಡಿದಾರ್ ಮೆಟೀರಿಯಲ್, ಕಾಟನ್ ಬೆಡ್, ಬೆಡ್ ಶೀಟ್, ತಲೆ ದಿಂಬುಗಳು ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಮೇಳದಲ್ಲಿ ಲಭ್ಯವಾಗಲಿದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ 1 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನೂ ಪಡೆಯುವ ಅವಕಾಶವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
.
ಕ್ರಿಸ್ಮಸ್- ಹೊಸವರ್ಷ ಅಂಗವಾಗಿ ಇಂದು ಖಾದಿ ಮೇಳ-2022
0
ಡಿಸೆಂಬರ್ 20, 2022
Tags