ಕಾಸರಗೋಡು: ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯ 'ಕ್ರಿಸ್ಮಸ್-ಹೊಸವರ್ಷ' ಆಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಖಾದಿ ಮೇಳ ಜಿಲ್ಲಾ ಪಂಚಾಯತ್ ವಠಾರದಲ್ಲಿ ಆರಂಭಗೊಮಡಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮೇಳ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಅಧ್ಯಕ್ಷತೆ ವಹಿಸಿದ್ದರು. ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಎಂ. ಮಲ್ಲಿಕಾ ಮೊದಲ ಮಾರಾಟ ನಡೆಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ. ಎಸ್. ಶಿಮ್ನಾ ಮೊದಲ ಮಾರಾಟವನ್ನು ಸ್ವೀಕರಿಸಿದರು. ಪಯ್ಯನ್ನೂರು ಖಾದಿ ಕೇಂದ್ರದ ನಿರ್ದೇಶಕ ಕೆ. ವಿ. ರಾಜೇಶ್ ಸ್ವಾಗತಿಸಿದರು. ಯೋಜನಾಧಿಕಾರಿ ಎಂ. ವಿ. ಮನೋಜ್ ಕುಮಾರ್ ವಂದಿಸಿದರು. ಖಾದಿ ಉತ್ಪನ್ನಗಳು 2023 ಜನವರಿ 5, ರವರೆಗೆ ಸರ್ಕಾರ ಘೋಷಿಸಿರುವ ಶೇ. 30ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಮೇಳದಲ್ಲಿ ವಿವಿಧ ರೀತಿಯ ಮುಂಡುಗಳು, ರೇಷ್ಮೆ ಕಾಟನ್ ಮಸ್ಲಿನ್ ಸೀರೆಗಳು, ಚೂಡಿದಾರ್ ಮೆಟೀರಿಯಲ್, ಕಾಟನ್ ಬೆಡ್, ಬೆಡ್ ಶೀಟ್, ತಲೆ ದಿಂಬುಗಳು ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಲಭ್ಯವಾಗಲಿದೆ.
ಕ್ರಿಸ್ಮಸ್- ಹೊಸವರ್ಷ 'ಖಾದಿ ಮೇಳ-2022' ಉದ್ಘಾಟನೆ
0
ಡಿಸೆಂಬರ್ 22, 2022
Tags