ಬೆಂಗಳೂರು: ಟಾಟಾ ಮೋಟರ್ಸ್, ಪ್ರಸ್ತುತ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕವಾಗಿದೆ. ಸದ್ಯಕ್ಕಂತೂ ದೇಶದಲ್ಲಿ ಯಾವುದೇ ಇತರ ವಾಹನ ಬ್ರಾಂಡ್, ಟಾಟಾವನ್ನು ಈ ಸಿಂಹಾಸನದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ. ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಟಾಟಾ ಮೋಟರ್ಸ್, ಮುಂದಿನ ವರ್ಷ ಇನ್ನಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
2023ಕ್ಕೆ, ಟಾಟಾ ಮೋಟಾರ್ಸ್ ಮೂರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಯೋಚಿಸುತ್ತಿದ್ದು, ಟಾಟಾ ಟಿಯಾಗೊ ಇವಿ, ಮಧ್ಯಮ ಗಾತ್ರದ SUV ಹ್ಯಾರಿಯರ್ ಮತ್ತು ಮೈಕ್ರೋ SUV ಪಂಚ್‌ನ ಎಲೆಕ್ಟ್ರಿಕ್ ವರ್ಶನ್ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಟಾಟಾ ಟಿಯಾಗೊ:
ಕೆಲವೇ ತಿಂಗಳುಗಳ ಹಿಂದೆ ಟಾಟಾ ಮೋಟಾರ್ಸ್ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿತ್ತು ಅದೇ ಟಿಯಾಗೊ ಇವಿ. ಬಿಡುಗಡೆಯ ಸಮಯದಲ್ಲಿ ಕಂಪನಿ, ಈ ಕಾರಿನ ಮಾದರಿ ಉತ್ತಮ ರಿಯಾಕ್ಷನ್ ಗಳಿಸುತ್ತದೆ ಎಂದು ನಿರೀಕ್ಷಿಸಿತ್ತು. ಆದರೆ ಅದರ ನಿರೀಕ್ಷೆ ಮೀರಿ ಅಗಾಧ ಪ್ರತಿಕ್ರಿಯೆಯನ್ನು ಪಡೆದಿತ್ತು. ಬುಕಿಂಗ್ನ ಮೊದಲ ದಿನದಲ್ಲೇ 10000 ಟಿಯಾಗೊ ಇವಿಗಳನ್ನು ಜನ ಕಾಯ್ದಿರಿಸಿದ್ದರು.
ಟಾಟಾ ಮೋಟಾರ್ಸ್ ಪ್ರಕಾರ, ಟಿಯಾಗೊ ಇವಿಗಾಗಿ ಜನ ಕಾಯಬೇಕಾದ ಅವಧಿ ನಾಲ್ಕು ತಿಂಗಳುಗಳು. Tata Tiago EV XE, XT, XZ+, ಮತ್ತು XZ+ ಟೆಕ್ ಲಕ್ಸ್ ಟ್ರಿಮ್‌ಗಳಲ್ಲಿ ಬರುತ್ತದೆ. ಅದಲ್ಲದೇ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು ಲಭ್ಯವಿದೆ: 19.2kWh ಮತ್ತು 24kWh. ಹಲವಾರು ಬ್ಯಾಟರಿ ಪ್ಯಾಕ್‌ಗಳು ಲಭ್ಯವಿವೆ, ಪ್ರತಿಯೊಂದೂ ವಿಶಿಷ್ಟ ಶ್ರೇಣಿಯನ್ನು ಹೊಂದಿದೆ. 24 kWh ಬ್ಯಾಟರಿ ಪ್ಯಾಕ್ 315 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇನ್ನೊಂದು ಆಯ್ಕೆಯು 19.2 kWh ಬ್ಯಾಟರಿ ಪ್ಯಾಕ್ ಆಗಿದ್ದು ಅದು ಚಿಕ್ಕದಾಗಿದೆ. ಇದು 250 ಕಿಮೀ ವ್ಯಾಪ್ತಿಯನ್ನು ಹೊಂದಿದೆ, ಇದು ಸುಮಾರು 200 ಕಿಮೀಗೆ ಸಮನಾಗಿರುತ್ತದೆ.
ಪಂಚ್ ಇವಿ:
ಟಾಟಾದ
ಎಂಟ್ರಿ-ಲೆವೆಲ್ ಮೈಕ್ರೋ ಎಸ್‌ಯುವಿ, ಪಂಚ್, ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ.
ಮುಂದಿನ ವರ್ಷ 2023 ರಲ್ಲಿ ಈ ಮಾಡೆಲ್‌ನ EV ಆವೃತ್ತಿಯನ್ನು ಪ್ರಾರಂಭಿಸುವ
ಸಾಧ್ಯತೆಯಿದೆ. ಟಾಟಾ ಪಂಚ್‌ಗಾಗಿ ಅವರು ಬೇರೆ ಎಂಜಿನ್ ಆಯ್ಕೆಗಳನ್ನು ನೋಡುತ್ತಿದ್ದಾರೆ
ಎಂದು ಈ ಹಿಂದೆ ಹೇಳಿದ್ದರು
ಎಲೆಕ್ಟ್ರಿಕ್ ಕಾರಿನ ನೀಲಿ ಆಯಕ್ಸೆಂಟ್, ಅದಕ್ಕೆ ಹೊಸ
ಲುಕ್ ನೀಡುತ್ತೆ. ಬಿಡುಗಡೆ ಮಾಡಿದ ಬಳಿಕ ಪಂಚ್ ಇವಿ ಬೆಲೆ 10 ರಿಂದ 14 ಲಕ್ಷ
ರೂಪಾಯಿಗಳವರೆಗೆ ಇರಬಹುದು ಎಂದು ಹೇಳಲಾಗುತ್ತಿದೆ.
ಹ್ಯಾರಿಯರ್ ಇವಿ:
ಈ ವರ್ಷದ ಆರಂಭದಲ್ಲಿ, ಟಾಟಾ ಮೋಟಾರ್ಸ್ ಸಂಪೂರ್ಣ-ಎಲೆಕ್ಟ್ರಿಕ್ ಹ್ಯಾರಿಯರ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿ ಬಂದಿತ್ತು. ವರದಿಯ ಪ್ರಕಾರ, ಕಾರು ಅಭಿವೃದ್ಧಿಯ ಹಂತದಲ್ಲಿದೆ. ಈ ಕಾರು 2023ರ ಮಧ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು. ಹ್ಯಾರಿಯರ್ ಎಲೆಕ್ಟ್ರಿಕ್ ಪರೀಕ್ಷಣೆ ಬಗ್ಗೆ ಇನ್ನೂ ಯಾವುದೇ ವರದಿಗಳು ಬಂದಿಲ್ಲ. ಆದರೂ 2023 ರ ಆರಂಭಕ್ಕೆ ಆಟೋ ಎಕ್ಸ್‌ಪೋವನ್ನು ಆಯೋಜಿಸಲಾಗಿದೆ.
ಹ್ಯಾರಿಯರ್‌ನ ಗಾತ್ರವನ್ನು ನೋಡಿದರೆ, ಟಾಟಾ ಮೋಟಾರ್ಸ್ EV ಶ್ರೇಣಿಯಲ್ಲಿನ ಎಲ್ಲಾ ಎಲೆಕ್ಟ್ರಿಕ್ ಕಾರುಗಳ ಅತಿದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಈ ಕಾರು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಹ್ಯಾರಿಯರ್ ಶ್ರೇಣಿಯ ಅತ್ಯಂತ ದುಬಾರಿ ಮಾದರಿಯಾಗಿದೆ. ಕೆಲವು ವರದಿಗಳ ಪ್ರಕಾರ ಇದರ ಬೆಲೆಯು ರೂ. 20-25 ಲಕ್ಷ ರೂಪಾಯಿ.