HEALTH TIPS

2025ರಿಂದ ಮೊಬೈಲ್ ತಯಾರಿಕಾ ಕಂಪನಿಗಳಿಗೆ Type-C ಚಾರ್ಜರ್ ಉತ್ಪಾದನೆಯನ್ನು ಕಡ್ಡಾಯಗೊಳಿಸಿದ ಭಾರತ

              ಭಾರತವು ಮೊಬೈಲ್ ತಯಾರಿಕಾ ಕಂಪನಿಗಳಿಗೆ ಭಾರತದಲ್ಲಿ ಟೈಪ್-ಸಿ ಯುಎಸ್‌ಬಿ ಚಾರ್ಜರ್ ಹೊಂದಿರುವ ಉತ್ಪನ್ನಗಳ ಮಾರಾಟವನ್ನು ಖಾತ್ರಿಪಡಿಸಲು ಮಾರ್ಚ್, 2025ರವರೆಗೆ ಗಡುವು ನೀಡಿದೆ.

                      ಸಾಮಾನ್ಯ ಚಾರ್ಜರ್ ನಿರ್ದೇಶನವೆಂದು ಕರೆಯಲಾಗಿರುವ ಈ ನಿಯಮದನ್ವಯ, ಮೊಬೈಲ್ ತಯಾರಿಕಾ ಕಂಪನಿಗಳು ಸಾಮಾನ್ಯ ಯುಎಸ್‌ಬಿ ಟೈಪ್-ಸಿ (Type-C) ಚಾರ್ಜರ್ ಪ್ರಮಾಣೀಕರಣ ಹೊಂದಿರುವುದು ಕಡ್ಡಾಯವಾಗಿದೆ.

                   ಇದಕ್ಕೂ ಮುನ್ನ ಯೂರೋಪ್ ಒಕ್ಕೂಟವು ಮೊಬೈಲ್ ತಯಾರಿಕಾ ಕಂಪನಿಗಳಿಗೆ ಈ ಪ್ರಮಾಣೀಕರಣವನ್ನು ಅಳವಡಿಸಿಕೊಳ್ಳಲು ಡಿಸೆಂಬರ್ 28, 2024ರ ಗಡುವು ವಿಧಿಸಿದೆ. ಇದಾದ ಕೆಲವೇ ತಿಂಗಳುಗಳ ಅಂತರದಲ್ಲಿ ಭಾರತವು ಮಾರ್ಚ್, 2025ರಿಂದ ಈ ಪ್ರಮಾಣೀಕರಣ ಹೊಂದುವುದನ್ನು ಕಡ್ಡಾಯಗೊಳಿಸಿ ಜಾರಿಗೆ ತರಲಿದೆ.

          ಈ ಕುರಿತು Economic Times ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, "ಚಾರ್ಜರ್‌ಗಳಿಗೆ ಸಂಬಂಧಪಟ್ಟಂತೆ ಜಾಗತಿಕ ಪೂರೈಕೆ ಸರಪಳಿ ಕೆಲಸ ಮಾಡುತ್ತಿದೆ. ಹೀಗಾಗಿ ನಾವು ಜಾಗತಿಕ ಕಾಲಮಾನಕ್ಕೆ ತಕ್ಕಂತೆ ನಮ್ಮನ್ನು ಹೊಂದಿಸಿಕೊಳ್ಳಬೇಕಿದೆ" ಎಂದು ತಿಳಿಸಿದ್ದಾರೆ.

              "ಯೂರೋಪ್ ಒಕ್ಕೂಟದಲ್ಲಿ ಈ ನಿರ್ದೇಶನ ಜಾರಿಯಾದ ಮೂರು ತಿಂಗಳ ನಂತರ ಭಾರತದಲ್ಲಿ ಜಾರಿಗೆ ಬರಲಿದೆ" ಎಂದೂ ಅವರು ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries