ವಾಷಿಂಗ್ಟನ್: ಚೀನಾ ಪರಮಾಣು ಶಕ್ತಿಯನ್ನು ಹಿಗ್ಗಿಸಿಕೊಳ್ಳು ತ್ತಿರುವ ಬಗ್ಗೆ ಅಮೆರಿಕ ಕಳವಳಕಾರಿ ವರದಿಯನ್ನು ಬಿಡುಗಡೆ ಮಾಡಿದೆ. ಚೀನಾ ಬಳಿ ಹಾಲಿ 400 ಪರಮಾಣು ಸಿಡಿತಲೆಗಳಿದ್ದು (ನ್ಯೂಕ್ಲಿಯರ್ ವಾರ್ಹೆಡ್), 2035ರ ಹೊತ್ತಿಗೆ ಇದು 1,500ಕ್ಕೆ ಏರಲಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ನ ವಾರ್ಷಿಕ ವರದಿ ತಿಳಿಸಿದೆ.
ಮುಂದಿನ ಆರು ವರ್ಷದಲ್ಲಿ ಪರಮಾಣು ಸಿಡಿತಲೆಗಳ ಸಂಖ್ಯೆ 700ಕ್ಕೆ ಏರಿಕೆಯಾಗಿ, 2030ರ ಹೊತ್ತಿಗೆ 1,000 ಮುಟ್ಟುತ್ತದೆ. 2035ಕ್ಕೆ ಇದು 1,500 ತಲುಪುತ್ತದೆ ಎಂದು ನ್ಯೂಕ್ಲಿಯರ್ ವಾರ್ಹೆಡ್ ಬೆಳವಣಿಗೆಯನ್ನು ಪಂಟಗನ್ ವಿವರಿಸಿದೆ. ದೇಶೀಯ ಮತ್ತು ವಿದೇಶಿ ನೆಲೆಗಟ್ಟಿನಲ್ಲಿ ಚೀನಾ ಅಣ್ವಸ್ತ್ರ ಕಾರ್ಯಕ್ರಮ ವಿಸ್ತರಣೆ ಬಗ್ಗೆ ಬಹಳ ಮಹತ್ವಾಕಾಂಯಾಗಿದ್ದು, ಮಿಲಿಟರಿ ಸೌಕರ್ಯಗಳನ್ನು ಮುಂದಿನ ದಶಕದಲ್ಲಿ ಅತ್ಯಾಧು ನಿಕ ಹಾಗೂ ವೈವಿಧ್ಯವಾಗಿ ಹೆಚ್ಚಿಸಿಕೊಳ್ಳಲು ಬಯಸಿದೆ.
ಚೀನಾದ ಅಣ್ವಸ್ತ್ರ ಆಧುನೀಕರಣವು
ಹಾಲಿ ಗುರಿಯನ್ನು ಮುಟ್ಟಿದ್ದು, ಸಂಕೀರ್ಣಗೊಂಡಿದೆ. ಹೀಗಾಗಿ ಆಧುನೀಕರಣವನ್ನು
ಮೇಲ್ದರ್ಜೆಗೆ ಏರಿಸಲು ಮುಂದಾ ಗಿದೆ. ಈ ನಿಟ್ಟಿನಲ್ಲಿ ಅಗತ್ಯವಾದ ಭೂಮಿ, ಸಾಗರ ಪ್ರದೇಶ,
ವಾಯು ನೆಲೆಯಲ್ಲಿ ಮೂಲ ಸೌಕರ್ಯ ವೃದ್ಧಿಸುವ ಕಾರ್ಯ ಶುರು ಮಾಡಿದೆ. ವೇಗವಾಗಿ ಕಾರ್ಯ
ನಿರ್ವಹಿಸುವ ಪ್ಲುಟೋನಿಯಂ ಬೈಜಕ (ರಿಯಾಕ್ಟರ್), ಮರುಪ್ರಕ್ರಿಯಾ ಸೌಲಭ್ಯಗಳ
ಕಾಮಗಾರಿಯನ್ನು 2021ರಲ್ಲೇ ಆರಂಭಿಸಿದೆ. ಈಗ ಅದಕ್ಕೆ ಇನ್ನಷ್ಟು ವೇಗ ನೀಡಲಿದೆ ಎಂದು
ಪೆಂಟಗನ್ ವರದಿ ತಿಳಿಸಿದೆ. ಚೀನಾದ ಶಸ್ತ್ರಾಸ್ತ್ರ, ಅಣ್ವಸ್ತ್ರ ಸಂಖ್ಯೆ ಏರಿದಷ್ಟು
ಅಮೆರಿಕದ ತಲೆಬಿಸಿ ಹೆಚ್ಚುತ್ತದೆ. ರಷ್ಯಾ ಮತ್ತು ಚೀನಾವನ್ನು ಪ್ರತಿಸ್ಪರ್ಧಿಗಳೆಂದು
ಎಣಿಸಿರುವ ಅಮೆರಿಕ, ಇವೆರಡೂ ಶಕ್ತಿಶಾಲಿ ರಾಷ್ಟ್ರಗಳನ್ನು ಏಕಕಾಲದಲ್ಲಿ ತಡೆಯುವ ಬಗೆ
ಹೇಗೆ ಎಂಬುದನ್ನೆ ಸದಾ ಚಿಂತಿಸುತ್ತಿರುತ್ತದೆ.
ಸೇನೆಯ ಆಧುನೀಕರಣಕ್ಕೆ ಗುರಿ: ಚೀನಾ
ಪೀಪಲ್ಸ್ ಲಿಬರೇಷನ್ ಅರ್ಮಿ (ಪಿಎಲ್ಎ) ಕೂಡ 2035ರ ವೇಳೆಗೆ ರಾಷ್ಟ್ರೀಯ ರಕ್ಷಣಾ
ಅಕಾಡೆಮಿ ಮತ್ತು ಸೇನಾ ಪಡೆಗಳ ಆಧುನೀಕರಣದ ಗುರಿಯನ್ನು ಹಾಕಿಕೊಂಡಿದೆ. ಭವಿಷ್ಯದಲ್ಲಿ
ಚೀನಾದ ಯುದ್ಧ ತಂತ್ರವು ವ್ಯವಸ್ಥೆಯನ್ನು ನಾಶ ಮಾಡುವ ಉದ್ದೇಶಕ್ಕೆ ತಿರುಗಬಹುದು ಎಂದು
ಪೆಂಟಗನ್ ಅಂದಾಜಿಸಿದೆ. ಇದನ್ನು ಚೀನಾ ರಕ್ಷಣಾ ತಜ್ಞರು ಬಹು ಆಯಾಮದ (ಮಲ್ಟಿ ಡೊಮೇನ್)
ನಿಖರ ಯುದ್ಧದ ಕಾರ್ಯತಂತ್ರವೆಂದು ಹೇಳುತ್ತಾರೆ ಎಂದು ಪೆಂಟಗನ್ ವರದಿ ತಿಳಿಸಿದೆ.
ಗುಟ್ಟು ಬಿಟ್ಟುಕೊಡದ ಚೀನಾ
ಚೀನಾದ
ಈ ಸೇನಾ ಕಾರ್ಯತಂತ್ರಗಳು ರಾಜಕೀಯ ವ್ಯವಸ್ಥೆ ಮತ್ತು ರಾಷ್ಟ್ರದ ಹಿತಾಸಕ್ತಿಗಳಿಗೆ
ಅನುಕೂಲಕರವಾಗಿ ಇರುವಂತೆ ಮತ್ತು ಅಂತಾರಾಷ್ಟ್ರೀಯ ವ್ಯವಸ್ಥೆಯ ಪರಿವರ್ತನೆಗೆ
ಪ್ರಯತ್ನಿಸುವಂತೆ ಇರುತ್ತದೆ. ಆದರೆ, ಇದರ ಒಳಗುಟ್ಟನ್ನು ಚೀನಾ ಎಂದಿಗೂ
ಬಿಟ್ಟುಕೊಡುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಚೀನಾದ ಸೇನಾ ಚಟುವಟಿಕೆಗಳ
ಪರಿಣಾಮವು ಇಂಡೋ&ಪೆಸಿಫಿಕ್ ಪ್ರಾದೇಶಿಕದಲ್ಲಿ ಪರಿಣಾಮಕ್ಕೆ ಕಾರಣವಾಗುತ್ತವೆ.
ಕೆಲವೊಮ್ಮೆ ಇದು ಅಪಾಯಕಾರಿಯೂ ಆಗಬಹುದು. ಈ ಪ್ರಾದೇಶಿಕದಲ್ಲಿ ಸಂಚರಿಸುವ ಚೀನಾ ನೌಕೆ
ಮತ್ತು ವಿಮಾನಗಳು ವೃತ್ತಿಪರವಲ್ಲದ ವರ್ತನೆಯನ್ನು ವ್ಯಕ್ತಪಡಿಸುತ್ತವೆ. ಇದು ಈ
ಪ್ರಾದೇಶಿಕದಲ್ಲಿ ಅಸ್ಥಿರತೆಗೆ ಕಾರಣವಾಗುತ್ತದೆ. ಹೀಗಾಗಿ ಚೀನಾದ ನಡೆಯ ಮೇಲೆ ಗುಮಾನಿಯ
ಕಣ್ಣು ಇರಿಸಲೇಬೇಕು ಎಂದಿದ್ದಾರೆ. ಪೆಂಟಗನ್ ವರದಿಯಲ್ಲಿ ಚೀನಾದ ರಕ್ಷಣಾ ವಿಷಯದ
ಹೊರತಾಗಿ ಆರ್ಥಿಕತೆ, ರಾಜಕೀಯ, ತೈವಾನ್ ಕುರಿತ ಧೋರಣೆಯನ್ನು ಚರ್ಚಿಸಲಾಗಿದೆ. ಅಮೆರಿಕದ
ಹೌಸ್ ಆ ರೆಪ್ರೆಸೆಂಟಟೀವ್ಸ್ನ (ಸಂಸತ್ನ ಕೆಳಮನೆ) ಸ್ಪೀಕರ್ ನ್ಯಾನ್ಸಿ ಪೆಲೋಸಿ
ತೈವಾನ್ಗೆ ಭೇಟಿ ನೀಡಿದ್ದು, ಚೀನಾವನ್ನು ಕೆರಳಿಸಿದ್ದರ ವಿವರಣೆ ಇದೆ.
ಅಮೆರಿಕಕ್ಕೆ ಚೀನಾ ಎಚ್ಚರಿಕೆ
ಭಾರತದೊಂದಿಗಿನ
ಸಂಬಂಧದ ವಿಚಾರದಲ್ಲಿ ಮೂಗು ತೂರಿಸದಂತೆ ಅಮೆರಿಕದ ಅಧಿಕಾರಿಗಳಿಗೆ ಚೀನಾ ಎಚ್ಚರಿಕೆ
ನೀಡಿದೆ ಎಂದು ಪೆಂಟಗನ್ ಹೇಳಿದೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ)
ಭಾರತದೊಂದಿಗೆ ಹೊಂದಿರುವ ಬಿಕ್ಕಟ್ಟಿನುದ್ದಕ್ಕೂ ಅದರ ತೀವ್ರತೆಯನ್ನು ಕಡಿಮೆಯಾಗಿ
ಬಿಂಬಿಸಲು ಚೀನಿ ಅಧಿಕಾರಿಗಳು ಮುಂದಾಗಿದ್ದರು. ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು
ಹಾಗೂ ಬಿಕ್ಕಟ್ಟು ಭಾರತೊಂದಿಗಿನ ದ್ವಿಪಯ ಬಾಂಧವ್ಯದ ಇತರ ಕ್ಷೇತ್ರಗಳಿಗೆ
ಹಾನಿಯೆಸಗುವುದನ್ನು ತಡೆಯುವುದು ತನ್ನ ಉದ್ದೇಶವಾಗಿದೆ ಎಂದು ಚೀನಾ ಪ್ರತಿಪಾದಿಸಿತ್ತು
ಎಂದು ಪೆಂಟಗನ್ ಹೇಳಿದೆ. 'ಅಮೆರಿಕದೊಂದಿಗೆ ಭಾರತ ನಿಕಟ ಬಾಂಧವ್ಯ ಬೆಳೆಸುವುದನ್ನು
ತಡೆಯುವ ಉದ್ದೇಶದಿಂದ ಗಡಿ ಉದ್ವಿಗ್ನತೆ ಹೆಚ್ಚುವುದನ್ನು ನಿವಾರಿಸಲು ಚೀನಾ
ಪ್ರಯತ್ನಿಸಿತ್ತು' ಎಂದು ವರದಿ ಹೇಳಿದೆ. ಚೀನಾದ ಮಿಲಿಟರಿ ಜಮಾವಣೆ ಕುರಿತು ಈ ವರದಿ ಗಮನ
ಕೇಂದ್ರೀಕರಿಸಿದೆ.
ಅಮೆರಿಕ, ರಷ್ಯಾದ ಪಾಲೇ ಹೆಚ್ಚು
ಜಾಗತಿಕವಾಗಿ
13, 080 ನ್ಯೂಕ್ಲಿಯರ್ ವಾರ್ಹೆಡ್ಗಳಿದ್ದು, ಅಮೆರಿಕ ಹಾಗೂ ರಷ್ಯಾದ ವಾರ್ಹೆಡ್ಗಳ
ಪಾಲು ಶೇ. 90 ಎನ್ನಲಾಗಿದೆ. ಒಟ್ಟು ಪರಮಾಣು ಸಿಡಿತಲೆಯ ಪೈಕಿ ಶೇ. 30ರಷ್ಟು ಸೇನೆಯ
ಮುಂಚೂಣಿ ಕಾರ್ಯತಂತ್ರ ಭಾಗದಲ್ಲಿ ಇವೆೆ ಎಂದು ಅಂದಾಜಿಸಲಾಗಿದೆ.
ಚೀನಾ ಗಡಿಯಲ್ಲಿ ಭಾರತ&ಅಮೆರಿಕದ ಸಮರಾಭ್ಯಾಸ
ಭಾರತ
ಮತ್ತು ಅಮೆರಿಕ ಸೇನೆಗಳು ಜಂಟಿಯಾಗಿ ನಡೆಸುವ 'ಯುಧ್ ಅಭ್ಯಾಸ್'ದ 18ನೇ ಆವೃತ್ತಿಯು
ಚೀನಾ ಗಡಿ ಸಮೀಪ ಆರಂಭಗೊಂಡಿದೆ. ಉತ್ತರಾಖಂಡದಲ್ಲಿನ ಚೀನಾದ ವಾಸ್ತವ ಗಡಿ ನಿಯಂತ್ರಣ
ರೇಖೆ (ಎಲ್ಎಸಿ)ಗೆ 100 ಕಿ.ಮೀ. ಒಳಗೆ ಈ ಸಮರಾಭ್ಯಾಸ ನಡೆಯುತ್ತಿದೆ. ಈ 'ಯುಧ್
ಅಭ್ಯಾಸ್'ವು ಶಾಂತಿಪಾಲನೆ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆ ವೇಳೆ ಪರಸ್ಪರ
ಕಾರ್ಯಸಾಧ್ಯತೆ ಹೆಚ್ಚಿಸುವ ಮತ್ತು ಪರಿಣತಿ ವೃದ್ಧಿಸುವ ಕಸರತ್ತಾಗಿದೆ. ಗಡಿ ಸಮೀಪದ
ಜಂಟಿ ಸಮರಾಭ್ಯಾಸ ನಡೆಯುವುದನ್ನು ಚೀನಾ ವಿರೋಧಿಸಿದೆ. ಇದು, ಉಭಯ ದೇಶಗಳ ಗಡಿ
ಒಪ್ಪಂದವನ್ನು ಉಲ್ಲಂಘಿಸುತ್ತದೆ ಮತ್ತು ಗಡಿಯಲ್ಲಿನ ಶಾಂತಿಗೆ ಭಂಗ ಉಂಟು ಮಾಡುತ್ತದೆ
ಎಂದು ಬುಧವಾರ ಹೇಳಿದೆ.