ಕಾಸರಗೋಡು: ಅಂರಾರಾಷ್ಟ್ರೀಯ ಪ್ರವಾಸೋದ್ಯಮ ರಂಗದಲ್ಲಿ ಬೇಕಲದ ಸೊಬಗನ್ನು ಗುರುತಿಸುವ ಬೇಕಲ್ ಬೀಚ್ ಉತ್ಸವದ ಪೂರ್ವಭಾವಿಯಾಗಿ ಡಿಸೆಂಬರ್ 20 ರಂದು ಮಧ್ಯಾಹ್ನ 3ಕ್ಕೆ ಡಂಗುರ ಮೆರವಣಿಗೆ ನಡೆಯಲಿದೆ. ಪಳ್ಳಿಕ್ಕರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಆವರಣದಿಂದ ಬೇಕಲ್ ಮಿನಿ ಸ್ಟೇಡಿಯಂನಲ್ಲಿ ಸಮಾರೋಪಗೊಳ್ಳಳಿದೆ.
ಮೆರವಣಿಗೆಯಲ್ಲಿ ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದ ಪ್ರಮುಖರು, ಜನಪ್ರತಿನಿಧಿಗಳು, ಕುಟುಂಬಶ್ರೀ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್.ಕುಞಂಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೇಕಲದಲ್ಲಿ ಡಿ.24ರಂದು ಬೀಚ್ ¥ಫೆಸ್ಟ್ ಆರಂಭಗೊಳ್ಳಳಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ರೊಬೊಟಿಕ್ಸ್ ಪ್ರದರ್ಶನದ ಉದ್ಘಾಟನೆಯನ್ನು ಬಂದರು ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹ್ಮದ್ ದೇವರ್ಕೋವ್, ಪುಷ್ಪ ಪ್ರದರ್ಶನವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕರು, ತ್ರಿಸ್ತರ ಪಂಚಾಯಿತಿ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ಪ್ರಮುಖ ರಾಜಕೀಯ ಪಕ್ಷದ ಪ್ರತಿನಿಧಿಗಳು ಮತ್ತು ಇತರರು ಭಾಗವಹಿಸಲಿದ್ದಾರೆ.
ಬೇಕಲ್ ಬೀಚ್ ಫೆಸ್ಟ್ 20ರಂದು ಪಳ್ಳಿಕೆರೆಯಲ್ಲಿ ಡಂಗುರ ಮೆರವಣಿಗೆ
0
ಡಿಸೆಂಬರ್ 17, 2022
Tags