ಮಧೂರು: ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್ ಕಾಸರಗೋಡು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಡಿ.20ರಂದು ಉಳಿಯತ್ತಡ್ಕ ಶಕ್ತಿ ಸಭಾ ಭವನದಲ್ಲಿ ಜರಗಲಿರುವುದು. ಬೆಳಗ್ಗೆ 9 ಗಂಟೆಗೆ ನೊಂದಾವಣೆ, 9.30ಕ್ಕೆ ಧ್ವಜಾರೋಹಣ, 10.10ರಿಂದ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ಜಿಲ್ಲಾ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಅಧ್ಯಕ್ಷ ಸದಾನಂದನ್ ಉದ್ಘಾಟಿಸಲಿದ್ದಾರೆ. ಪೆರ್ಲ ನಾಲಂದ ಕಾಲೇಜು ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ, ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಈಶ್ವರ ರಾವ್, ಬಿಎಂಎಸ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ವಕೀಲ ಮುರಳೀಧÀರನ್, ಎನ್.ಟಿ.ಯು. ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ, ಎನ್ ಜಿ ಒ ಸಂಘ್ ರಾಜ್ಯ ಉಪಾಧ್ಯಕ್ಷ ಪಿತಾಂಬರನ್, ಕೆ.ಜಿ.ಒ ಸಂಘ್ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಕುಂಟಾರು ಶುಭಾಶಂಸನೆಗೈಯುವರು. ಜಿಲ್ಲಾ ಉಸ್ತುವಾರಿ ರಾಜ್ಯ ಪ್ರತಿನಿಧಿ ಸುಧೀರ್ ಯಜ್ಞದಾಸ್ ನೇತೃತ್ವದಲ್ಲಿ ಸಂಘಟನಾ ಚರ್ಚೆ, ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ವಿಘ್ನೇಶ್ವರ ಭಟ್ ಅವರಿಂದ ಸಂಘಟನಾ ಭಾಷಣ ನಡೆಯಲಿದೆ. ಚುನಾವಣೆ, ನೂತನ ಪದಾಧಿಕಾರಿಗಳ ಪದಗ್ರಹಣ, ಧ್ವಜಾವರೋಹಣದೊಂದಿಗೆ ಮುಕ್ತಾಯವಾಗಲಿದೆ.
ಡಿ.20ರಂದು ಉಳಿಯತ್ತಡ್ಕದಲ್ಲಿ ಕೆಎಸ್‍ಪಿಎಸ್ ಸಂಘ್ ವಾರ್ಷಿಕ ಮಹಾಸಭೆ
0
ಡಿಸೆಂಬರ್ 18, 2022
Tags