ತಿರುವನಂತಪುರಂ: ಎರಡು ವರ್ಷದ ಮಗುವೊಂದು ಆಟಚವಾಡುತ್ತಾ ಬ್ಯಾಟರಿ ನುಂಗಿ ಬಿಟ್ಟಿತ್ತು. ಇದಾದ ಇಪ್ಪತ್ತೇ ನಿಮಿಷದಲ್ಲಿ ವೈದ್ಯರು ಮಗುವನ್ನು ಸಾವಿನ ದವಡೆಯಿಂದ ಪಾರು ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಟಿವಿ ರಿಮೋಟ್‌ನಲ್ಲಿ ಬಳಸಲಾಗಿದ್ದ ಐದು ಸೆಂಟಿಮೀಟರ್ ಉದ್ದ ಮತ್ತು ಒಂದೂವರೆ ಸೆಂಟಿಮೀಟರ್ ಅಗಲದ ಬ್ಯಾಟರಿಯನ್ನು ಮಗು ಆಟವಾಡುತ್ತಾ ನುಂಗಿದೆ.
ತಕ್ಷಣ ಪೋಷಕರು ಪಕ್ಕದ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ನಂತರ ಮಗುವನ್ನು ನಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಲಾಯಿತು. ಅಲ್ಲಿ ಆಪರೇಷನ್ ನಡೆದು ಮಗುವಿನ ಪ್ರಾಣ ಉಳಿದಿದೆ
ಕೇರಳದ ರಾಜಧಾನಿ ತಿರುವನಂತಪುರಂ ಹೊರವಲಯದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರು ಈ ಕೆಲಸ ಮಾಡಿದ್ದು. ಇಲ್ಲಿನ ನಿಮ್ಸ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಜಯಕುಮಾರ್, ಎಂಡೋಸ್ಕೋಪಿ ಮೂಲಕ ಹೊಟ್ಟೆಯಿಂದ ಬ್ಯಾಟರಿಯನ್ನು ತೆಗೆದು ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ವೈದ್ಯರು, 'ಮಗು ರಿಷಿಕೇಶ್ನನ್ನು ಅವರ ಪೋಷಕರು ಮೊದಲು ತಮ್ಮ ಮನೆಯ ಸಮೀಪವಿರುವ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ನಂತರ ಇಲ್ಲಿಗೆ ಕರೆತರಲಾಯಿತು. ವಿಷಯ ತಿಳಿದ ತಕ್ಷಣ ನಾವು ಆಪರೇಷನ್ ಥಿಯೇಟರ್‌ಗೆ ಮಗುವನ್ನು ಕರೆದುಕೊಂಡು ಹೋಗಿ ಅರಿವಳಿಕೆ ನೀಡಿದ್ದೇವೆ. ಸುಮಾರು 20 ನಿಮಿಷಗಳಲ್ಲಿ ಬ್ಯಾಟರಿ ತೆಗೆಯಲಾಯಿತು. ಈ ಬ್ಯಾಟರಿ ಅಪ್ಪಿತಪ್ಪಿ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದರೂ ಪ್ರಾಣಕ್ಕೆ ಅಪಾಯವಿತ್ತು' ಎಂದು ಜಯಕುಮಾರ್ ಹೇಳಿದರು.