HEALTH TIPS

ಜನವರಿ ತಿಂಗಳಲ್ಲಿ ದೇಶಾದ್ಯಂತ ಜಿ20 ಕಾರ್ಯಕ್ರಮಗಳದ್ದೇ ಕಾರುಬಾರು

 

             ನವದೆಹಲಿ: 2023 ರಲ್ಲಿ ಭಾರತ ಜಿ-20 ಅಧ್ಯಕ್ಷತೆ ಹೊಂದಿರಲಿದ್ದು ದೇಶಾದ್ಯಂತ 200ಕ್ಕೂ ಅಧಿಕ ಸಭೆಗಳು ನಿಗದಿಯಾಗಿವೆ. ಜನವರಿ ತಿಂಗಳಲ್ಲಿ ಸತತ ಕಾರ್ಯನಿರತ ಗುಂಪು ಸಭೆಗಳು ನಿಗದಿಯಾಗಿದ್ದು, ಒಂದು ವರ್ಚ್ಯುಯಲ್ ಸಭೆಯೂ ನಡೆಯಲಿದೆ. 

                ವಿವಿಧ ವಿಭಾಗಗಳಲ್ಲಿ ಜಿ20 ಕಾರ್ಯಕ್ರಮಗಳು ನಡೆಯಲಿದ್ದು, ಕೋಲ್ಕತ್ತಾದಲ್ಲಿ ಮೊದಲ ಸಭೆ ಜ.9 ರಿಂದ 11 ವರೆಗೆ ಆರ್ಥಿಕ ಸೇರ್ಪಡೆಗಾಗಿ ಜಾಗತಿಕ ಪಾಲುದಾರಿಕೆ ವಿಷಯವಾಗಿ ಸಭೆ ನಡೆಯಲಿದೆ.

            ಕಾರ್ಯನಿರತ ಗುಂಪು ಸಭೆಗಳು ಆರೋಗ್ಯದ ವಿಷಯವಾಗಿ ತಿರುವನಂತಪುರಂ ನಲ್ಲಿ ನಡೆಯಲಿದ್ದರೆ ಚೆನ್ನೈ ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಸಭೆ ನಡೆಯಲಿದೆ. ಗುವಾಹಟಿ ಮೊದಲ ಸ್ಥಿರ ಆರ್ಥಿಕತೆಗೆ ಸಂಬಂಧಿಸಿದ ಸಭೆ ನಡೆಸಲಿದ್ದರೆ, ಚಂಡೀಗಢದಲ್ಲಿ ಮೊದಲ ಆರ್ಥಿಕ ಆರ್ಕಿಟೆಕ್ಚರ್ ಸಭೆ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

                   ಎಲ್ಲಾ ನಿಯೋಗಗಳಿಗೂ ಸುರಕ್ಷತೆ ಹಾಗೂ ಅಗತ್ಯತೆಗಳನ್ನು ಒದಗಿಸುವುದು, ಸ್ಥಳವನ್ನು ಗುರುತಿಸುವುದೇ ಅತ್ಯಂತ ದೊಡ್ಡ ಪ್ರಕ್ರಿಯೆಯಾಗಿರಲಿದೆ. ಕೇಂದ್ರೀಕೃತ ವ್ಯವಸ್ಥೆಯಲ್ಲಿ ಜಿ-20 ಕಾರ್ಯಕ್ರಮಗಳು ನಡೆಯಲಿದ್ದು, ಇಂಡೋನೇಷ್ಯಾಗಿಂತಲೂ ವಿಭಿನ್ನವಾಗಿರಲಿದೆ.
 
                    ಈ ಕಾರ್ಯಕ್ರಮಗಳನ್ನು ಅಂತಿಮಗೊಳಿಸಬೇಕಾದರೆ ಸ್ಥಳಗಳನ್ನು ತಪಾಸಣೆ ಮಾಡಿ ಅಂತಿಮಗೊಳಿಸಲಾಗಿದೆ. ಇಲ್ಲಿಗೆ ಬರುವ ಪ್ರತಿನಿಧಿಗಳು ಅತ್ಯುತ್ತಮ ನೆನಪುಗಳೊಂದಿಗೆ ತಮ್ಮ ದೇಶಗಳಿಗೆ ತೆರಳಿ ನೆನಪುಗಳನ್ನು ಹಂಚಿಕೊಳ್ಳಬಹುದು ಆ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

       ಜನವರಿ ತಿಂಗಳಲ್ಲಿ 17-18 ರಂದು ಡಿಜಿಟಲ್ ಎಕಾನಮಿ ಬಗ್ಗೆ ವರ್ಚ್ಯುಯಲ್ ಸಭೆಗಳು ನಡೆಯಲಿದ್ದು, ಈ ಸಭೆಯಲ್ಲಿ ಹೆಚ್ಚಿನ ಮಂದಿ ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries