ತಿರುವನಂತಪುರಂ: ಕೊಚುವೇಲಿ ಯಾರ್ಡ್ ಮಾರ್ಗದಲ್ಲಿ ರೈಲು ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಕೊಚುವೇಲಿ ಯಾರ್ಡ್ ನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಮಾಡಲಾಗಿದೆ.
21 ರೈಲುಗಳನ್ನು ರದ್ದುಗೊಳಿಸಲಾಗಿದೆ. ನಿಲಂಬೂರ್ ರಸ್ತೆ ಮೂಲಕ ಕೊಟ್ಟಾಯಂ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ಕೇವಲ ಮೂರು ಗಂಟೆ ತಡವಾಗಿ ಸಂಚರಿಸಲಿದೆ. ಕೊಚುವೇಲಿ ಚಂಡೀಗಢ ಸೂಪರ್ ಫಾಸ್ಟ್ ಆಲಪ್ಪುಳದಿಂದ ಪ್ರಯಾಣ ಆರಂಭವಾಗಲಿದೆ.
ಕೊಲ್ಲಂ- ಕನ್ಯಾಕುಮಾರಿ ಮೆಮು ಎಕ್ಸ್‍ಪ್ರೆಸ್, ಕೊಚುವೇಲಿ- ನಾಗರ್‍ಕೋಯಿಲ್ ಎಕ್ಸ್‍ಪ್ರೆಸ್, ನಿಲಂಬೂರ್- ಕೊಚುವೇಲಿ ರಾಜ್ಯ ರಾಣಿ ಎಕ್ಸ್‍ಪ್ರೆಸ್, ಕೊಚುವೇಲಿ- ಲೋಕಮಾನ್ಯತಿಲಕ್ ಗರೀಬ್ ರಥ ಎಕ್ಸ್‍ಪ್ರೆಸ್, ಎಸ್‍ಎಂವಿಟಿ ಬೆಂಗಳೂರು- ಕೊಚುವೇಲಿ ಹಮ್ಸಾಫರ್ ಎಕ್ಸ್‍ಪ್ರೆಸ್, ಮಂಗಳೂರು- ಕೊಚುವೇಲಿ ಅಂತ್ಯೋದಯ ಎಕ್ಸ್‍ಪ್ರೆಸ್, ತಿರುವನಂತಪುರಂ- ಕೊಚುವೇಲಿ ಅಂತ್ಯೋದಯ ಎಕ್ಸ್‍ಪ್ರೆಸ್, ತಿರುವನಂತಪುರಂ- ಗುರುವಾಯೂರ್ ಕೊಲ್ಲಂ ಎಕ್ಸ್‍ಪ್ರೆಸ್,À ಪುನಲೂರ್ - ನಾಗರ್‍ಕೋಯಿಲ್ ಎಕ್ಸ್‍ಪ್ರೆಸ್, ಕನ್ಯಾಕುಮಾರಿ - ಪುನಲೂರ್ ಎಕ್ಸ್‍ಪ್ರೆಸ್ ಎರ್ನಾಕುಳಂ - ತಿರುವನಂತಪುರಂ ವಂಚಿನಾಡ್ ಅನ್ನು ರದ್ದುಗೊಳಿಸಲಾಗಿದೆ.
ಕೊಚುವೇಲಿ ಯಾರ್ಡ್ ನಿರ್ಮಾಣ ಕಾಮಗಾರಿ; 21 ರೈಲು ಸಂಚಾರ ರದ್ದು
0
ಡಿಸೆಂಬರ್ 11, 2022