ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಮೊದಲ 39 ದಿನಗಳಲ್ಲಿ 223 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಪ್ರಸ್ತುತ ಶಬರಿಮಲೆ ಯಾತ್ರೆಯ ಋತುವಿದ್ದು, ಈ ಅವಧಿಯಲ್ಲಿ ಹುಂಡಿಯ ಸಂಗ್ರಹ ಒಂದೇ 70.10 ಕೋಟಿ ರೂಪಾಯಿ ಆಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ ಆನಂದಗೋಪನ್ ಹೇಳಿದ್ದಾರೆ.
ಬೇರೆ ಆದಾಯ ಮೂಲಗಳ ಬಗ್ಗೆ ಮಾಹಿತಿ ನೀಡಲು ಟಿಡಿಬಿ ಅಧ್ಯಕ್ಷರು ನಿರಾಕರಿಸಿದ್ದಾರೆ. ಈ ಪೈಕಿ ಅರವನ ಪ್ರಸಾದ ಮಾರಾಟ ಪ್ರಮುಖ ಆದಾಯದ ಮೂಲವಾಗಿದೆ.
ಡಿ.30 ರಂದು ಆರಂಭವಾಗುವ ಮಕರವಿಲಕ್ಕು ಋತುವಿನ ಕೊನೆಯ ಹಂತಕ್ಕೆ ಈಗಾಗಲೇ ಸಕಲ ಸಿದ್ಧತೆಗಳೂ ನಡೆದಿವೆ ಎಂದು ಟಿಡಿಬಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಜ.11 ರಂದು ಸಾಂಪ್ರದಾಯಿಕ ಎರುಮೆಲಿ ಪೆಟ್ಟತುಲ್ಲಾಲ್ ಆಚರಣೆ ಹಾಗೂ ಪಂದಳಂ ನಿಂದ ಜ.12 ರಿಂದ ತಿರುವಾಭರಣಂ ಮೆರವಣಿಗೆಗೂ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.