ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಶಬರಿ ಭೋಜನ ಶಾಲೆಯನ್ನು ಡಿ. 23. ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ದೀಪ ಪ್ರಜ್ವಲನೆಗೈದು ಲೋಕಾರ್ಪಣೆ ಗೊಳಿಸುವರು. ಅಂದು ಬೆಳಗ್ಗೆ 12 ತೆಂಗಿನಕಾಯಿ ಗಣಪತಿ ಹವನ,9:30ಕ್ಕೆ ಪೂಜ್ಯ ಸ್ವಾಮೀಜಿಗಳವರಿಗೆ ಪೂರ್ಣ ಕುಂಭ ಸ್ವಾಗತ, ಪಾದುಕ ಪೂಜೆ ನಡೆಯಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಲಿರುವರು. ಉಳಿಯ ನಾರಾಯಣ ಆಸ್ರ, ಗೋಪಾಲಕೃಷ್ಣ ಪೈ ಬದಿಯಡ್ಕ, ಡಾ. ಜನಾರ್ದನ ನಾಯ್ಕ್, ನವೀನ್ ಭಟ್ ಕುಂಜರಿಗಾನ, ಅಶ್ವಿನಿ ಭಟ್ ಮೊಳೆಯಾರು, ಶ್ಯಾಮಪ್ರಸಾದ್ ಮಾನ್ಯ, ಕುಂಞÂ ಕಣ್ಣ ಗುರುಸ್ವಾಮಿ, ವೆಂಕಪ್ಪ ನಾಯಕ ಮಾನ್ಯ, ಮಹೇಶ್ ವಳಕುಂಜ, ಮಧುಸೂದನ ಚುಕ್ಕಿನಡ್ಕ ಮೊದಲಾದವರು ಭಾಗವಹಿಸಲಿರುವರು. ಡಿ.24 ರಂದು ಶನಿವಾರ 28ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಅಂದು ರಾತ್ರಿ 10 ಗಂಟೆಗೆ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ "ಮೇಧಿನಿ ನಿರ್ಮಾಣ- ಮಹಿಷ ಮರ್ಧಿನಿ" ಯಕ್ಷಗಾನ ಬಯಲಾಟ ಜರಗಲಿರುವುದು.
ಚುಕ್ಕಿನಡ್ಕ: ಶಬರಿ ಲೋಕಾರ್ಪಣೆ ಡಿಸೆಂಬರ್ 23ರಂದು
0
ಡಿಸೆಂಬರ್ 18, 2022
Tags