ಕಾಸರಗೋಡು: ಆದೂರು ಗ್ರಾಮದ ಕಾನಕ್ಕೋಡಿನಲ್ಲಿ ಅತೀ ಪುರಾತನ ಕಾಲದಲ್ಲಿ ನಶಿಸಿ ಹೋಗಿದ್ದ ಕಾನಕ್ಕೋಡು ಶ್ರೀ ವನಶಾಸ್ತಾರ ಕ್ಷೇತ್ರದ ಜೀರ್ಲೋದ್ಧಾರ ಕಾಮಗಾರಿ ಪೂರ್ಣಗೊಂಡಿದ್ದು, ಕ್ಷೇತ್ರದಲ್ಲಿ ಡಿಸೆಂಬರ್ 23ರಿಂದ 25ರ ವರೆಗೆ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿರುವುದಾಗಿ ಕ್ಷೇತ್ರ ಸಮಿತಿ ಅಧ್ಯಕ್ಷ ಭಾಸ್ಕರ ಮಣಿಯಾಣಿ ಕೋಳಿಕ್ಕಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ. 25ರಂದು ಬೆಳಗ್ಗೆ 11.57ರ ಶುಭ ಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ ನಡೆಯಲಿರುವುದು. ತಂತ್ರಿವರ್ಯರಾದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹಾಗೂ ಬ್ರಹ್ಮ ಶ್ರೀ ರವೀಶ ತಂತ್ರಿ ಕುಂಬಾರು ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಈಗಾಗಲೇ ಭಾಸ್ಕರ ಮಣಿಯಾಣಿ ಕೋಳಕ್ಕಾಲು ಅಧ್ಯಕ್ಷರಾಗಿ, ಕೃಷ್ಣನ್ ಮೀತ್ತಲೆವೀಡು ಪ್ರಧಾನ ಕಾರ್ಯದರ್ಶಿ, ಐ. ನಾರಾಯಣ ಇತ್ತಿಕಾಲುಮೂಲೆ ಕೋಶಾಧಿಕಾರಿ ಹಾಗೂ ಇತರ ಸದಸ್ಯರನ್ನೊಳಗೊಂಡ ಸೇವಾ ಸಮಿತಿಯನ್ನು ರಚಿಸಿ ಬ್ರಹ್ಮ ಕಲಶೋತ್ಸವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಡಿ.23ರಂದು, ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ದೇವಸ್ಥಾನ ವರೆಗೆ ನಡೆಯಲಿದೆ. ಧಾರ್ಮಿಕ, ಸಾಂಸ್ಕೃತಿಕ ಸಭೆಗಳ ಉದ್ಘಾಟನೆ, ಭರತನಾಟ್ಯ, ಸಮೂಹ ನೃತ್ಯ, ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ವಿವಿಧ ದಿವಸಗಳಲ್ಲಿ ದೇವಾತಾ ಕಾರ್ಯ, ಭಜನೆ, ಭಜನಾಮೃತ, ಯಕ್ಷಗಾನ ತಾಳಮದ್ದಳೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮಿಮಿಕ್ರಿ, ಮೆಗಾ ತಿರುವಾದಿರ, ನೃತ್ಯ ಶಿಲ್ಪಂ ನಡೆಯಲಿದೆ. 2023 ಜನವರಿ 14ರಂದು ಶ್ರೀ ಕ್ಷೇತ್ರದಲ್ಲಿ ಪಾಟು ಉತ್ಸವ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ಪ್ರಧಾನ ಕರ್ಯದರ್ಶಿ ಕೃಷ್ಣನ್ ಮೀತ್ತಲೆವಿಡು, ಕಾರ್ಯದರ್ಶಿ ದೇವಾನಂದ ಶೆಟ್ಟಿ, ಕೋಶಾಧಿಕಾರಿ ಏ ನಾರಾಯಣ ಇತ್ತಿಕಾಲುಮೂಲೆ, ಪ್ರಚಾರ ಸಮಿತಿ ಅಧ್ಯಕ್ಷ ದಾಮೋದರ ಎಂ ಸುದ್ದಿಗೋಷ್ಠೀಯಲ್ಲಿ ಉಪಸ್ಥಿತರಿದ್ದರು.
ಆದೂರು ಕಾನಕ್ಕೋಡು ಶ್ರೀ ವನಶಾಸ್ತಾರ ಕ್ಷೇತ್ರದಲ್ಲಿ 23ರಿಂದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
0
ಡಿಸೆಂಬರ್ 19, 2022
Tags