HEALTH TIPS

ಮರೆಯಾಗಿರುವ 24 ಸ್ಮಾರಕಗಳ ಪತ್ತೆಗೆ ಸಂಸ್ಕೃತಿ ಸ್ಥಾಯಿ ಸಮಿತಿ ಶಿಫಾರಸು

                ವದೆಹಲಿ :ಸಂರಕ್ಷಿತ ಸ್ಥಳಗಳೆಂದು ಪರಿಗಣಿಸಲ್ಪಟ್ಟಿದ್ದ 24 ಸ್ಮಾರಕಗಳ ಕುರುಹುಗಳು ಮಾಯವಾಗಿರುವುದಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಒಪ್ಪಿಕೊಂಡು ಐದು ವರ್ಷಗಳಾದರೂ, ಅದನ್ನು ಪತ್ತೆಹಚ್ಚುವ ಪ್ರಯತ್ನಕ್ಕೆ ಈಗ ಮರುಜೀವ ಬಂದಿದೆ.

                  ಮರೆಯಾಗಿರುವ ಈ ಐತಿಹಾಸಿಕ ಸ್ಮಾರಕಗಳನ್ನು ಹಳೆಯ ಕಂದಾಯ ದಾಖಲೆಗಳು, ಕಂದಾಯ ನಕ್ಷೆಗಳು ಹಾಗೂ ಪ್ರಕಟಿತ ವರದಿಗಳ ನೆರವಿನೊಂದಿಗೆ ಕಂಡುಹಿಡಿಯಬಹುದೆಂದು ಸಾರಿಗೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಕುರಿತ ಸ್ಥಾಯಿ ಸಮಿತಿಯು ಸಂಸ್ಕೃತಿ ಸಚಿವಾಲಯಕ್ಕೆ ತಿಳಿಸಿದೆ.

                ಕೇಂದ್ರ ಸರಕಾರದ ಸಂರಕ್ಷಣೆಯಲ್ಲಿರುವ ಎಲ್ಲಾ 3693 ಸ್ಮಾರಕಗಳು ಭೌತಿಕವಾಗಿ ಅಸ್ತಿತ್ವದಲ್ಲಿವೆಯೇ ಎಂಬ ಬಗ್ಗೆ ತಪಾಸಣೆ ನಡೆಸಲು ಸರ್ವೇಕ್ಷಣೆಯನ್ನು ಕೈಗೆತ್ತಿಕೊಳ್ಳುವಂತೆಯೂ ಸಮಿತಿಯು ಶಿಫಾರಸು ಮಾಡಿದೆ.

                  ಕಳೆದ ವಾರ ರಾಜ್ಯಸಭಾದಲ್ಲಿ ಮಂಡಿಸಲಾದ ಕಣ್ಮರೆಯಾಗಿರುವ ಸ್ಮಾರಕಗಳು ಹಾಗೂ ಭಾರತದಲ್ಲಿ ಸ್ಮಾರಕಗಳ ರಕ್ಷಣೆ ಕುರಿತ 324 ನೇ ವರದಿಯು ಅಧ್ಯಯನ ಮಾಡಲ್ಪಟ್ಟ ಸ್ಮಾರಕಗಳ ಮಾದರಿಗಳ ಪೈಕಿ ಕನಿಷ್ಠ 24 ಸ್ಮಾರಕಗಳ ಕುರುಹುಗಳು ಈಗ ಗೋಚರಿಸುತ್ತಿಲ್ಲವೆಂದು ಹೇಳಿದೆ. ಅಲ್ಲದೆ ಉಳಿದ ಸ್ಮಾರಕಗಳನ್ನು ಕೂಡಾ ಮೂಲ ಅಧ್ಯಯನ ನಡೆದ ಒಂದು ದಶಕದ ಆನಂತರ ಹೊಸದಾಗಿ ಅವುಗಳ ಸರ್ವೇಕ್ಷಣೆಯನ್ನು ನಡೆಸಲಾಗಿಲ್ಲವೆಂದು ಅದು ತಿಳಿಸಿದೆ.

              2013 ರಲ್ಲಿ ಕಂಪ್ಟ್ರೋಲರ್ ಹಾಗೂ ಆಡಿಟರ್ ಜನರಲ್ ಆಫ್ ಇಂಡಿಯಾ (ಭಾರತೀಯ ಮಹಾಲೇಖಪಾಲ) ಪ್ರಕಟಿಸಿದ ಸ್ಮಾರಕಗಳು ಹಾಗೂ ಅಮೂಲ್ಯವಸ್ತುಗಳ ಸಂರಕ್ಷಣೆ ಕುರಿತ ವರದಿಯಲ್ಲಿ 92 ಸ್ಮಾರಕಗಳು ನಾಪತ್ತೆಯಾಗಿರುವುದಾಗಿ ಉಲ್ಲೇಖಿಸಲಾಗಿತ್ತು. ತರುವಾಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿಯು ನಾಪತ್ತೆಯಾಗಿರುವ ಸ್ಮಾರಕಗಳನ್ನು ಹುಡುಕುವ ಬೃಹತ್ ಕಾರ್ಯಾಚರಣೆಯನ್ನು ನಡೆಸಿತು. ಈ ಸಮೀಕ್ಷೆಯಲ್ಲಿ 42 ತಾಣಗಳು ಭೌತಿಕವಾಗಿ ಅಸ್ತಿತ್ವದಲ್ಲಿರುವುದನ್ನು, ಹಾಗೂ 14 ತಾಣಗಳು ತ್ವರಿತಗತಿ ನಗರೀಕರಣದಿಂದಾಗಿ ಬಾಧಿತವಾಗಿರುವುದನ್ನು ಪತ್ತೆಹಚ್ಚಲಾಗಿತ್ತು. ಸುಮಾರು 12 ತಾಣಗಳು ಅಣೆಕಟ್ಟು ಅಥವಾ ಜಲಾಶಯಗಳಲ್ಲಿ ಮುಳುಗಡೆಯಾಗಿರುವುದಾಗಿ ವರದಿ ತಿಳಿಸಿತ್ತು. ಆದರೆ ಉಳಿದ 24 ಪಾರಂಪರಿಕ ತಾಣಗಳ ಕುರುಹುಗಳೇ ಪತ್ತೆಯಾಗಿಲ್ಲವೆಂದು ಅದು ತಿಳಿಸಿದೆ.

            ತ್ವರಿತಗತಿಯ ನಗರೀಕರಣ, ಸಮರ್ಪಕ ವಿವರಗಳ ಅಲಭ್ಯತೆ ಮತ್ತಿತರ ಅಂಶಗಳು ನಾಪತ್ತೆಯಾಗಿರುವ ತಾಣಗಳಿರುವ ಸ್ಥಳಗಳನ್ನು ಗುರುತಿಸಲು ಅಡ್ಡಿಯಾಗಿವೆ ಎಂದು ವರದಿ ತಿಳಿಸಿದೆ. ಆದಾಗ್ಯೂ ವೈಜ್ಞಾನಿಕ ಉಪಕರಣಗಳು ಹಾಗೂ ಪುರಾತತ್ವ ಸರ್ವೇಕ್ಷಣೆಗಳ ಸಹಾಯದಿಂದ ಈ ಸ್ಮಾರಕಗಳನ್ನು ಪತ್ತೆಹಚ್ಚುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು ಎಂದು ಅದು ಏಳಿದೆ.

           ಹೀಗೆ ಕಣ್ಮರೆಯಾಗಿರುವ ಈ 24 ಸ್ಮಾರಕಗಳ ಪೈಕಿ ಕೆಲವಾದರೂ ನಿಕಟಭವಿಷ್ಯದಲ್ಲಿ ಪತ್ತೆಯಾಗುವ ಸಾಧ್ಯತೆಯೂ ಇರುವುದರಿಂದ ಅವುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳಿಲ್ಲವೆಂದು ಸಮಿತಿ ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries