ಕಾಸರಗೋಡು: ಹತ್ತು ದಿವಸಗಳ ಕಾಲ ನಡೆಯಲಿರುವ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವದ ಪ್ರವೇಶ ಟಿಕೆಟ್‍ಗಳು ಕುಟುಂಬಶ್ರೀ ಮೂಲಕ ಮಾರಾಟ ಜಾರಿಯಲ್ಲಿದ್ದು, ಇದುವರೆಗೆ ಎರಡುವರೆ ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟಗೊಂಡಿರುವುದಾಗಿ ಸ್ವಾಗತಸಮಿತಿ ಅಧ್ಯಕ್ಷ ಶಾಸಕ ಸಿ.ಎಚ್.ಕುಂಜಂಬು ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದರೆ. ಡಿ. 24ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೇಕಲ್ ಉತ್ಸವ ಉದ್ಘಾಟಿಸುವರು.
ಬೆಳಗ್ಗೆ 11ರಿಂದ ರಾತ್ರಿ 11ರ ವರೆಗೆ ಉತ್ಸವ ನಡೆಯಲಿದ್ದು, ಮೂರು ಪ್ರಮುಖ ವೇದಿಕೆಗಳಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯಲಿದೆ. ಜತೆಗೆ ಆಹಾರ ಮೇಳ, ವಿವಿಧ ಕಲಾಮೇಳ, ಸಾಹಸಿಕ ವಿನೋದ ಸಂಚಾರಿ ರೈಡ್‍ಗಳು ನಡೆಯಲಿದೆ. ಉತ್ಸವನಗರಿಯಲ್ಲಿ 200ಕ್ಕೂ ಹೆಚ್ಚು ಸ್ಟಾಲ್‍ಗಳು ಕಾರ್ಯಪ್ರವೃತ್ತವಾಗಲಿದೆ. ಉತ್ಸವದಲ್ಲಿ ವಿದೇಶೀಯರನ್ನೂ ಪಲ್ಗೊಳ್ಳುವಂತೆ ಮಾಡಲಾಗುವುದು. ಬಿಆರ್‍ಡಿಸಿ, ಡಿಟಿಪಿಸಿ ಜತೆಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿರುವುದಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಬಿಆರ್‍ಡಿಸಿ ಎಂಡಿ ಶಿಜಿನ್ ಪರಂಬತ್, ಹಾಶ್ಮಿ ಕುಞಬ್ದುಲ್ಲ, ಕಾರ್ಯಕ್ರಮ ಸಮಿತಿ ಸಂಚಾಲಕ ಹಕೀಂ ಕುನ್ನಿಲ್, ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ, ಜ್ಯೋತಿಕುಮಾರ್ ಉಪಸ್ಥಿತರಿದ್ದರು.
24ರಿಂದ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಫೆಸ್ಟ್-ಎರಡುವರೆ ಲಕ್ಷ ಟಿಕೆಟ್ ಮಾರಾಟ
0
ಡಿಸೆಂಬರ್ 20, 2022
Tags