HEALTH TIPS

24 ಗಂಟೆಯಲ್ಲಿ ಲಿವರ್‌ನ ಆರೋಗ್ಯ ಹೆಚ್ಚಿಸುವುದು ಹೇಗೆ?

 ನಮ್ಮ ಆರೋಗ್ಯಕ್ಕೆ ಲಿವರ್ ಆರೋಗ್ಯ ತುಂಬಾನೇ ಮುಖ್ಯ. ನಮ್ಮ ಲಿವರ್‌ನ ಆರೋಗ್ಯಕ್ಕೆ ಅದರಲ್ಲಿರುವ ಕಶ್ಮಲಗಳನ್ನು ಹೊರ ಹಾಕಬೇಕು, ನಿಮ್ಮ ಲಿವರ್ ಅನ್ನು 24 ಗಂಟೆಯೊಳಗೆ ಕ್ಲೆನ್ಸ್ ಅಂದರೆ ಶುದ್ಧ ಮಾಡಬಹುದು.

24 ಗಂಟೆಯಲ್ಲಿ ಲಿವರ್‌ ಕ್ಲೆನ್ಸ್ ಮಾಡುವುದು ಹೇಗೆ, ಲಿವರ್‌ ಕ್ಲೆನ್ಸ್ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಲಿವರ್‌ ಅನ್ನು 5 ರೀತಿಯಲ್ಲಿ ಕ್ಲೆನ್ಸ್ ಮಾಡಬಹುದು

1. ಪಾನೀಯ ಬಳಸಿ ಲಿವರ್ ಕ್ಲೆನ್ಸ್ ಮಾಡುವುದು ಲಿವರ್‌ ಕ್ಲೆನ್ಸ್‌ಗೆ ಕ್ರ್ಯಾನ್‌ ಬೆರ್ರಿ ಜ್ಯೂಸ್‌ ತುಂಬಾನೇ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು * ಕ್ರ್ಯಾನ್‌ಬೆರ್ರಿ ಜ್ಯೂಸ್‌ * ನೀರು * ನಟ್‌ಮಗ್‌ * ಶುಂಠಿ * 3 ಕಿತ್ತಳೆ * 3 ನಿಂಬೆಹಣ್ಣು * ಟೀ ಪಾತ್ರೆ ಮಾಡುವ ವಿಧಾನ: ಕ್ರ್ಯಾನ್‌ಬೆರ್ರಿ ಜ್ಯೂಸ್‌ಗೆ 3 ಕಪ್ ನೀರು ಸೇರಿಸಿ, ಈಗ 1/2 ಚಮಚ ಶುಂಠಿ ಪುಡಿ, 1/2 ಚಮಚ ನಟ್‌ಮಗ್‌ ಸೇರಿಸಿ 20 ನಿಮಿಷಿ ಕಡಿಮೆ ಉರಿಯಲ್ಲಿ ಕಾಯಿಸಿ ನಂತರ ತಣಿಯಲು ರೂಂನ ಉಷ್ಣತೆಯಲ್ಲಿ ಇಡಿ. * ಈಗ 3 ಕಿತ್ತಳೆ ಹಣ್ಣು, 3 ನಿಂಬೆ ರಸ ಹಿಂಡಿ ಕ್ರ್ಯಾನ್‌ಬೆರ್ರಿ ಜ್ಯೂಸ್‌ಗೆ ಸೇರಿಸಿ, ಬೇಕಿದ್ದರೆ ಸ್ವಲ್ಪ ನ್ಯಾಚಯರಲ್‌ ಸ್ವೀಟ್ನರ್ ಸೇರಿಸಬಹುದು. ಈ ಪಾನೀಯವನ್ನು ದಿನವಿಡೀ ಕುಡಿಯಿರಿ.

2. ಡಯಟ್‌ ಮೂಲಕ ಲಿವರ್‌ ಕ್ಲೆನ್ಸ್ ಮಾಡುವುದು

* ನೀವು ಸಂಸ್ಕರಿಸಿದ ಆಹಾರಗಳಿಂದ ದೂರವಿರಿ, ಸಂಸ್ಕರಿಸಿದ ಆಹಾರ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಂಸ್ಕರಿಸಿದ ಆಹಾರದ ಬದಲಿಗೆ ಹಣ್ಣುಗಳು, ನಟ್ಸ್, ಕ್ಯಾರೆಟ್‌ ಮುಂತಾದ ಆಹಾರ ಸೇವಿಸಿ. ಲಿವರ್ ಕ್ಲೆನ್ಸ್ ಟೀ ಮಾಡಿ ಕುಡಿಯಿರಿ.

ಲಿವರ್ ಕ್ಲೆನ್ಸಿಂಗ್ ಟೀ ಬೇಕಾಗುವ ಸಾಮಗ್ರಿಗಳು

ನೀರು 2 ಕಪ್

ನಿಂಬೆಹಣ್ಣು 1

1 ಚಮಚ ತುರಿದ ಶುಂಠಿ

ನೀರನ್ನು ಕುದಿಸಿ, ಅದಕ್ಕೆ ಶುಂಠಿ ಸೇರಿಸಿ ಇನ್ನೂ ಸ್ವಲ್ಪ ಹೊತ್ತು ಕುದಿಸಿ, ನಂತರ ಸೋಸಿ ಆ ನೀರಿಗೆ ನಿಂಬೆರಸ ಸೇರಿಸಿ ಕುಡಿಯಿರಿ. ಈ ಟೀ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

3. ಪೊಟಾಷ್ಯಿಯಂ ಅಧಿಕವಿರುವ ಆಹಾರಗಳ ಮೂಲಕ ಕ್ಲೆನ್ಸ್ ಮಾಡಿ

24 ಗಂಟೆಯಲ್ಲಿ ಲವರ್ ಕ್ಲೆನ್ಸ್ ಮಾಡುವಾಗ ಸಿಹಿ ಗೆಣಸು, ಟೊಮೆಟೊ ಸಾಸ್‌, ಹಸಿ ಬಟಾಣಿ, ಪಾಲಾಕ್‌ ಈ ಬಗೆಯ ಆಹಾರ ಸೇವಿಸಿ.

4. ಕಾಫಿಯ ಮೂಲಕ ಲಿವರ್‌ ಕ್ಲೆನ್ಸ್ ಮಾಡಿ ಕಾಫಿ ಕೂಡ ಲಿವರ್‌ ಆರೋಗ್ಯ ಉತ್ತಮ ಪಡಿಸವಲ್ಲಿ ಸಹಕರಿ. ದಿನಾ ಕಾಫಿ ಕುಡಿಯುವುದು ಲಿವರ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಕಾಫಿಯನ್ನು ಎರಡು ಲೋಟಕ್ಕಿಂತ ಅಧಿಕ ಕುಡಿಯಬೇಡಿ.

5. ಲಿವರ್‌ ಸಪ್ಲಿಮೆಂಟ್ಸ್‌ ಮೂಲಕ ಲಿವರ್‌ ಡಿಟಾಕ್ಸ್ ಮಾಡಿ

ಅರಿಶಿಣ, ಕರಿ ಜೀರಿಗೆ ಇವುಗಳನ್ನು ಬಳಸುವುದರಿಂದ ಲಿವರ್ ಆರೋಗ್ಯ ಹೆಚ್ಚುವುದು.

6. 24 ಗಂಟೆಯಲ್ಲಿ ಲಿವರ್‌ ಡಿಟಾಕ್ಸ್ ಮಾಡುವುದು ಹೇಗೆ:

ಲಿವರ್ ಕ್ಲೆನ್ಸ್ ಮಾಡುವುದರಿಂದ ಕಿಡ್ನಿ ಸ್ಟೋಟ್, ಗಾಲ್‌ ಬ್ಲೇಡರ್‌ ಈ ಬಗೆಯ ಸಮಸ್ಯೆ ಕೂಡ ಹೋಗಲಾಡಿಸಬಹುದು.

ಲಿವರ್ ಕ್ಲೆನ್ಸ್‌ನ ಮಾಡುವುದು ಹೇಗೆ?

* ಎಂಜೈಮ್ಸ್ ಪ್ಯಾಕೆಟ್‌ ತೆಗೆದು ಎರಡು ಲೀಟರ್‌ ನೀರಿನಲ್ಲಿ ಮಿಕ್ಸ್ ಮಾಡಿ, ನಿಮ್ಮ ಆಹಾರದ ಜತೆ ಸೇವಿಸಿ.

* ಒಂದು ಬಾಟಲಿನಲ್ಲಿ 60 ml ಆಲೀವ್‌ ಎಣ್ಣೆ, 30 ml ಎಂಜೈಮ್ಸ್ ಲಿಕ್ವಿಡ್ ಹಾಕಿ, 2 ಲೀಟರ್ ನೀರು ಸೇರಿಸಿ ಈ ನೀರನ್ನು ಕುಡಿಯಿರಿ. ರಾತ್ರಿ ಈ ನೀರನ್ನು ತೆಗೆದುಕೊಂಡ

ಮೇಲೆ ಅರ್ಧ ಗಂಟೆಯಲ್ಲಿ ನಿದ್ದೆ ಮಾಡಿ.

ಈ ರೀತಿ ಮಾಡಿದರೆ ಲಿವರ್‌ನ ಆರೋಗ್ಯ ಕಾಪಾಡಬಹುದು.

7. ಲಿವರ್‌ನ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಳು

* ಡ್ರಗ್‌

* ಮದ್ಯಪಾನ

* ಅಸುರಕ್ಷಿತ ಲೈಂಗಿಕಕ್ರಿಯೆ

* ಟ್ಯಾಟೂ

* ವೈರಸ್ ಸಂಕು

* ಕೆಮಿಕಲ್ ಅಧಿಕವಿರುವ ಕಡೆ ಅಥವಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ.

ಲಿವರ್‌ನ ಆರೋಗ್ಯ ಹಾಳಾದಾಗ ಕಂಡು ಬರುವ ಲಕ್ಷಣಗಳು

* ವಾಂತಿ'

* ತಲೆಸುತ್ತು

* ತಾವಾಗಲೂ ಕಾಯಿಲೆ ಬೀಳುವುದು

* ಕೆಳಹೊಟ್ಟೆ ಉಬ್ಬುವುದು

* ಕೆಳಹೊಟ್ಟೆಯಲ್ಲಿ ನೋವು

* ಅರಿಶಿಣ ಕಾಮಲೆ

ಕೊನೆಯದಾಗಿ: ವಾರಕ್ಕೊಮ್ಮೆಯಾದರೂ ಈ ರೀತಿ ಲಿವರ್‌ ಕ್ಲೆನ್ಸ್ ಮಾಡಿ, ಇದರಿಂದ ಅನೇಕ ಬಗೆಯ ಕಾಯಿಲೆ ತಡೆಗಟ್ಟಬಹುದು.


 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries