ಮುಳ್ಳೇರಿಯ: ದೇಲಂಪಾಡಿಯ ಕೀರಿಕ್ಕಾಡು ಸ್ಮಾರಕ ಸಭಾಮಂದಿರದಲ್ಲಿ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಸಹಯೋಗದಲ್ಲಿ ಡಿ.25 ರಂದು ‘ಗಡಿ ಸಂಸ್ಕøತಿ ಉತ್ಸವ’, ಸಂಘದ ವಾರ್ಷಿಕೋತ್ಸವ , ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಹಾಗೂ ಯಕ್ಷ ಸಾಧಕರಿಗೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಕ್ಕೆ ಗಣಹೋಮ, 8ಕ್ಕೆ ಶ್ರೀಗೋಪಾಲಕೃಷ್ಣ ದೇವರ ಪೂಜೆ ನಡೆಯಲಿದೆ. ಬಳಿಕ 9. ರಿಂದ ಯಕ್ಷಗಾನಾರ್ಚನೆ ನಡೆಯಲಿದೆ. 9.30 ರಿಂದ ಪ್ರಾತ್ಯಕ್ಷಿಕೆ ಸಹಿತ ಅರ್ಥಗಾರಿಕೆಯ ವಿಶ್ಲೇಷಣೆ ನಡೆಯಲಿದೆ. ವಿಟ್ಲ ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್ ಹಾಗೂ ವೆಂಕಟರಾಮ ಭಟ್ ಸುಳ್ಯ ನಿರ್ವಹಿಸುವರು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟರಮಣ ಭಟ್, ಪ್ರಶಾಂತ್ ರೈ ಮುಂಡಾಲಗುತ್ತು, ಶಿವಪ್ರಸಾದ್ ಭಟ್ ಕಾಂತಾವರ, ಮೋಹನ ಮೆಣಸಿನಕಾನ ಭಾಗವತರಾಗಿ ಹಾಗೂ ಶಂಕರ ಭಟ್ ಕಲ್ಮಡ್ಕ, ಚಂದ್ರಶೇಖರ ಗುರುವಾಯನಕೆರೆ ಚೆಂಡೆ-ಮದ್ದಳೆಯಲ್ಲಿ ಭಾಗವಹಿಸುವರು. ಸಂವಾದದಲ್ಲಿ ಜಯರಾಮ ಭಟ್ ದೇವಸ್ಯ, ದಿವಾಣ ಶಿವಶಂಕರ ಭಟ್, ಸದಾಶಿವ ರೈ ಬೆಳ್ಳಿಪ್ಪಾಡಿ, ಡಿ.ವೆಂಕಟರಮಣ ಮಾಸ್ತರ್, ಕೀರಿಕ್ಕಾಡು ಗಣೇಶ ಶರ್ಮ, ಡಾ.ಸೂರ್ಯನಾರಾಯಣ ಕೆ, ಐತ್ತಪ್ಪ ಗೌಡ ಮುದಿಯಾರು, ಕಲ್ಲಡ್ಕಗುತ್ತು ರಾಮಯ್ಯ ರೈ, ರಾಮಣ್ಣ ಮಾಸ್ತರ್, ಮೋಹನ ಸುವರ್ಣ ಬೆಳ್ಳಿಪ್ಪಾಡಿ ಭಾಗವಹಿಸುವರು. 11.45 ರಿಂದ ಗಾನ ನೃತ್ಯ ವೈವಿಧ್ಯ ಹಾಗೂಈ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಅಪರಾಹ್ನ 1.30 ರಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಭೀಷ್ಮ-ಪರಶುರಾಮ, ಸಮರ ಸಂವಾದ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಲಿದೆ.
ಸಂಜೆ 3.30 ರಿಂದ ಯಕ್ಷಗಾನ ಕಲಾಸಂಘದ 78ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಕರ್ನಾಟಕ ಕೆ.ಪಿ.ಎಸ್ಸಿ ನಿವೃತ್ತ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ನಡೆಯಲಿದೆ. ಗಣರಾಜ ಕುಂಬ್ಳೆ ರಾಮಕುಂಜ ಅಭಿನಂದನಾ ಭಾಷಣ ಮಾಡುವರು. ಎಸ್.ವಿ.ಭಟ್ ಕಾಸರಗೋಡು ಕೀರಿಕ್ಕಾಡು ಸಂಸ್ಮರಣೆ ನಡೆಸುವರು. ಶಂಭು ಶರ್ಮ ವಿಟ್ಲ ಹಾಗೂ ಚೆನ್ನಪ್ಪ ಗೌಡ ಸಜಿಪ ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭ ಡಾ.ರಮಾನಂದ ಬನಾರಿ ಬರೆದಿರುವ ‘ಹನಿಹನಿ ಹನಿಯುತ್ತಿರುವ ಹನಿಗಳು’ ಕೃತಿಯ ಬಿಡುಗಡೆ ನಡೆಯಲಿದೆ. ಪ್ರದೀಪ್ ಕುಮಾರ್ ಕಲ್ಕೂರ ಕೃತಿ ಬಿಡುಗಡೆಗೊಳಿಸುವರು. ವೈದ್ಯ, ಸಾಹಿತಿ ಡಾ.ಮುರಲೀಮೋಹನ ಚೂಂತಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. hಚಿಜಪಾಡಿ ನಾರಾಯಣ ನಾೈಕ್ ಉಪಸ್ಥಿತರಿರುವರು. ಸಂಜೆ 5 ರಿಂದ ಬನಾರಿ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ, ಶ್ರೀಕೃಷ್ಣ ವಿಜಯ ಯಕ್ಷಗಾನ ಬಯಲಾಟವು ಸರೋಜಿನಿ ಶರಣ ಬನಾರಿ ನಿರ್ದೇಶನದಲ್ಲಿ ನಡೆಯಲಿದೆ. ರಾತ್ರಿ 8.30 ರಿಂದ ಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ರಾಜಾಧ್ವರ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದೇಲಂಪಾಡಿಯಲ್ಲಿ ಗಡಿ ಸಂಸ್ಕøತಿ ಉತ್ಸವ 25 ರಂದು
0
ಡಿಸೆಂಬರ್ 18, 2022
Tags