ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ಲಿಫ್ಟ್ ನಿರ್ಮಿಸಲು ಲೋಕೋಪಯೋಗಿ ಇಲಾಖೆ 25.50 ಲಕ್ಷ ರೂ. ಮಂಜೂರುಮಾಡಿದೆ.
ನಿನ್ನೆ ಲೋಕೋಪಯೋಗಿ ಇಲಾಖೆಯಿಂದ ಲಿಫ್ಟ್ ನಿರ್ಮಾಣಕ್ಕೆ ಹಣ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಹೆಚ್ಚುವರಿ ಕಾರ್ಯದರ್ಶಿ ಲತಾ ಕುಮಾರಿ ಆದೇಶ ಹೊರಡಿಸಿದ್ದಾರೆ.
ಕ್ಲಿಫ್ ಹೌಸ್ ನಲ್ಲಿ ಲಿಫ್ಟ್ ನಿರ್ಮಿಸಲು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ನೀಡಿದ ಅಂದಾಜಿನಂತೆ ಮೊತ್ತ ಮಂಜೂರಾಗಿದೆ. ಕ್ಲಿಫ್ ಹೌಸ್‍ನಲ್ಲಿ ಲಿಫ್ಟ್ ನಿರ್ಮಿಸುವ ನಿರ್ಧಾರವು ವೆಚ್ಚವನ್ನು ಕಡಿತಗೊಳಿಸುವ ಹಣಕಾಸು ಇಲಾಖೆಯ ಪ್ರಸ್ತಾವನೆ ಮಧ್ಯೆ ಹೊರಬಿದ್ದಿದೆ. ಕ್ಲಿಫ್ ಹೌಸ್ ನಲ್ಲಿ ಮೊದಲ ಬಾರಿಗೆ ಲಿಫ್ಟ್ ನಿರ್ಮಿಸಲಾಗುತ್ತಿದೆ. ಕ್ಲಿಫ್ ಹೌಸ್ ನ ಒಂದು ಮಹಡಿಗೆ ಹೋಗಲು ಇμÉ್ಟೂಂದು ದೊಡ್ಡ ಮೊತ್ತವನ್ನು ಖರ್ಚು ಮಾಡಿ ಲಿಫ್ಟ್ ನಿರ್ಮಿಸಲಾಗುತ್ತಿದೆ. ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಲಿಫ್ಟ್ ನಿರ್ಮಿಸಲು ಮೊತ್ತವನ್ನು ನಿಗದಿಪಡಿಸಲಾಗಿದೆ.
ಈ ಹಿಂದೆ ಕ್ಲಿಫ್ ಹೌಸ್ ನಲ್ಲಿ ಗೋಶಾಲೆ ನಿರ್ಮಾಣಕ್ಕೆ 42.90 ಲಕ್ಷ ರೂ. ಖರ್ಚುಮಾಡಲಾಗಿತ್ತು. ಇದು ಬಹಳ ವಿವಾದಾಸ್ಪದವಾಗಿತ್ತು. ವೆಚ್ಚಕ್ಕೆ ಕಡಿವಾಣ ಹಾಕಲು ಹಣಕಾಸು ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದರೂ ಲೋಕೋಪಯೋಗಿ ಇಲಾಖೆ ಕ್ಲಿಫ್ ಹೌಸ್ ನಲ್ಲಿ ಲಿಫ್ಟ್ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದೆ. ಜೊತೆಗೆ ಖಾದಿ ಮಂಡಳಿ ಅಧ್ಯಕ್ಷ ಪಿ.ಜಯರಾಜನ್ ಹೊಸ ಕಾರು ಖರೀದಿಸಿದ್ದು ವಿವಾದಕ್ಕೀಡಾಗಿತ್ತು.
ಮಹಡಿ ಏರಲು ಕಷ್ಟ: ಕ್ಲಿಫ್ ಹೌಸ್‍ನಲ್ಲಿ ಲಿಫ್ಟ್ ನಿರ್ಮಾಣಕ್ಕೆ 25.50 ಲಕ್ಷ ಮಂಜೂರು: ಮೊದಲ ಬಾರಿಗೆ ಲಿಫ್ಟ್ ನಿರ್ಮಾಣ
0
ಡಿಸೆಂಬರ್ 03, 2022
Tags