ಕುಂಬಳೆ : ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದ್ದು, ಇನ್ನು ಮುಂದಿನ ಬ್ರಹ್ಮಕಲಶಾಭಿಷೇಕದ ತಯಾರಿ ಪ್ರಾರಂಭಗೊಳ್ಳಲಿದೆ. ಇದರ ಪೂರ್ವಭಾವಿಯಾಗಿ ಮಾಯಿಪ್ಪಾಡಿ ಅರಸರು, ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ವೇದಮೂರ್ತಿ ಗಣೇಶ ತಂತ್ರಿಯವರ ಸಮಕ್ಷಮದಲ್ಲಿ ಸಮಿತಿಯ ಸರ್ವ ಸದಸ್ಯರು ಹಾಗೂ ಊರ ಪರವೂರ ಭಕ್ತದಿಗಳ ಉಪಸ್ಥಿತಿಯಲ್ಲಿ ಡಿ. 25 ರಂದು ಭಾನುವಾರ ಬೆಳಗ್ಗೆ 11.30 ಕ್ಕೆ ಕಣಿಪುರ ಸನ್ನಿಧಿಯಲ್ಲಿ ಬ್ರಹ್ಮಕಲಶಾಭಿμÉೀಕಕ್ಕೆ ಮಹಾ ಪ್ರಾರ್ಥನೆಯ ಮೂಲಕ ಶ್ರೀ ದೇವರ ಅಪ್ಪಣೆಯನ್ನು ಪಡೆಯಲಾಗುವುದು. ಪುಣ್ಯ ಕಾರ್ಯಕ್ಕೆ ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹವನ್ನು ಪಡೆಯಬೇಕಾಗಿ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಣಿಪುರ ಬ್ರಹ್ಮಕಲಶಾಭಿಷೇಕ ವಿಧಾನಗಳಿಗೆ ಮಹಾ ಪ್ರಾರ್ಥನೆ 25 ರಂದು
0
ಡಿಸೆಂಬರ್ 21, 2022
Tags