ನವದೆಹಲಿ:ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದಲ್ಲಿ 2022-23 ನೇ ಹಣಕಾಸು ವರ್ಷದಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹದಲ್ಲಿ ಶೇ.26 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರಕಾರ ರವಿವಾರ ತಿಳಿಸಿದೆ.
ಕಳೆದ ವರ್ಷ ನೇರ ತೆರಿಗೆಗಳ ಒಟ್ಟು ಸಂಗ್ರಹವು 10,83,150 ಕೋಟಿ ರೂ.
ಆಗಿದ್ದು, 2022-23 ನೇ ಸಾಲಿನ ಡಿಸೆಂಬರ್ 17 ರಂದು 13,63,649 ಕೋಟಿ ರೂ. ಗೆ ತಲುಪುವ ಮೂಲಕ ಒಟ್ಟು 25.90 ಶೇಕಡ ಏರಿಕೆಯಾಗಿದೆ. ಕಾರ್ಪೊರೇಟ್ ಹಾಗೂ ವೈಯಕ್ತಿಕ ಆದಾಯದ ಮೇಲಿನ ಕರಗಳು ಕೂಡಾ ನೇರ ತೆರಿಗೆಯು ಒಳಗೊಳ್ಳುತ್ತದೆ.
ಡಿಸೆಂಬರ್ 17ರ ತನಕ ಒಟ್ಟು ನೇರ ತೆರಿಗೆ ಸಂಗ್ರಹವು 11,35,754 ಕೋಟಿ ರೂ. ಆಗಿದ್ದು, ಕಳೆದ ಸಾಲಿಗಿಂತ ಶೇ.19.81 ಏರಿಕೆಯಾಗಿರುವುದಾಗಿ ಕೇಂದ್ರ ವಿತ್ತ ಸಚಿವಾಲಯ ಪ್ರಕಟಿಸಿದೆ. 2021-22ನೇ ಸಾಲಿನಲ್ಲಿ 9,47,959 ಕೋಟಿ ರೂ. ನೇರತೆರಿಗೆ ಸಂಗ್ರಹವಾಗಿತ್ತು.
ಈ ಸಾಲಿನಲ್ಲಿ ಡಿಸೆಂಬರ್ 17bರವರೆಗೆ ಸಂಗ್ರಹವಾದ ನೇರ ತೆರಿಗೆಯ ಮೊತ್ತವು ಹಾಲಿ ಬಜೆಟ್ ನಲ್ಲಿ ಅಂದಾಜಿಸಲಾದ ಸಂಗ್ರಹದ ಶೇ.80 ರಷ್ಟಾಗಿದೆ. ಹಾಲಿ ಹಣಕಾಸು ವರ್ಷದಲ್ಲಿ 14.20 ಲಕ್ಷ ಕೋಟಿ ನೇರ ತೆರಿಗೆಯನ್ನು ಸಂಗ್ರಹಿಸುವ ಗುರಿಯನ್ನು ಬಜೆಟ್ ಹೊಂದಿತ್ತು.