ಮುಳ್ಳೇರಿಯ: ಕಿಡ್ನಿ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆ ಒದಗಿಸುವ ಕಾರಡ್ಕ ಬ್ಲಾಕ್ ಪಂಚಾಯಿತಿ ಯೋಜನೆ ಒಂದು ವರ್ಷ ಪೂರ್ಣಗೊಳಿಸಿದೆ. ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಎಲ್ಲಾ ಏಳು ಪಂಚಾಯತಿಗಳ ರೋಗಿಗಳಿಗೆ ಸೇವೆ ಒದಗಿಸಲು ಮುಳಿಯಾರ್ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಮೀಸಲು ಡಯಾಲಿಸಿಸ್ ಘಟಕ ಕಾರ್ಯನಿರ್ವಹಿಸುತ್ತಿದೆ. ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಯೂ ಆರ್ಥಿಕ ತೊಂದರೆಗಳಿಂದ ಡಯಾಲಿಸಿಸ್ ಪಡೆಯುವುದರಿಂದ ವಂಚಿತಗೊಳ್ಳಬಾರದೆಂಬ ಪರಿಕಲ್ಪನೆಯಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಕಳೆದ ಒಂದು ವರ್ಷದಲ್ಲಿ 2736 ಮಂದಿ ರೋಗಿಗಳಿಗೆ ಆರೈಕೆ ಸೇವೆಗಳನ್ನು ಒದಗಿಸಲಾಗಿದೆ. ಪ್ರಸ್ತುತ 31 ಮಂದಿ ಸೇವೆಯನ್ನು ಬಳಸುತ್ತಿದ್ದಾರೆ. 10 ಅರ್ಜಿಗಳು ಪರಿಶೀಲನೆಯಲ್ಲಿವೆ.
ಡಯಾಲಿಸಿಸ್ ಸೆಂಟರ್ ಸೆಕೆಂಡರಿ ಪ್ಯಾಲಿಯೇಟಿವ್ ಕೇರ್ ಆಶ್ರಯದಲ್ಲಿ ಪ್ರಥಮ ವಾರ್ಷಿಕೋತ್ಸವ ಮತ್ತು ಕುಟುಂಬ ಸಮ್ಮಿಲನವನ್ನು ಆಯೋಜಿಸಿತು. ಮುಳಿಯಾರ್ ಸಿಎಚ್ ಸಿ(ಸಮುದಾಯ ಆರೋಗ್ಯ ಕೇಂದ್ರ)ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಉದ್ಘಾಟಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಯಾಲಿಸಿಸ್ ರೋಗಿಗಳು ಹಾಗೂ ಕುಟುಂಬದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಂಡೋಸಲ್ಫಾನ್ ಪೀಡಿತರು ಸೇರಿದಂತೆ ಸಾರ್ವಜನಿಕರಿಗೆ ಡಯಾಲಿಸಿಸ್ ಕೇಂದ್ರದ ಸೇವೆಗಳು ಲಭ್ಯವಿವೆ. ಡಯಾಲಿಸಿಸ್ ತಂತ್ರಜ್ಞ ಎಂ.ಎಂ.ಖೈರುನ್ನೀಸಾ ಡಯಾಲಿಸಿಸ್ ರೋಗಿಗಳ ಆರೈಕೆ ವಿಷಯ ಕುರಿತು ಮಾತನಾಡಿದರು. ಕಾರಡುಕ ಬ್ಲಾಕ್ ವೈದ್ಯಾಧಿಕಾರಿ ಶಮೀಮಾ ತನ್ವೀರ್ ವರದಿ ಮಂಡಿಸಿದರು. ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ, ಬ್ಲಾಕ್ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಸವಿತಾ, ಬಿ.ಕೆ.ನಾರಾಯಣನ್, ಸಾವಿತ್ರಿ ಬಾಲನ್ ಮತ್ತಿತರರು ಮಾತನಾಡಿದರು. ಆರೋಗ್ಯ ಮೇಲ್ವಿಚಾರಕ ಪಿ.ಕುಂಞ ಕೃಷ್ಣನ್ ನಾಯರ್ ಸ್ವಾಗತಿಸಿ, ಕಾರ್ಯದರ್ಶಿ ಎಲ್.ರಂಜುμÁ ನಾಯರ್ ವಂದಿಸಿದರು.
ಕಿಡ್ನಿ ರೋಗಿಗಳ ಆರೈಕೆಯ ಡಯಾಲಿಸಿಸ್ ಘಟಕಕ್ಕೆ ಒಂದು ವರ್ಷ ಪೂರ್ಣ: 2736 ರೋಗಿಗಳಿಗೆ ಸೇವೆ
0
ಡಿಸೆಂಬರ್ 06, 2022