ಕಾಸರಗೋಡು: ಇತಿಹಾಸ ಪ್ರಸಿದ್ಧ ಹಾಗೂ ಕಾರಣೀಕದ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಡಿ. 28ರಿಂದ ಜ. 2ರ ವರೆಗೆ ಜರುಗಲಿದೆ. ಡಿ. 28ರಂದು ಸಂಜೆ ಶುದ್ಧಿಕಲಶ, ಪ್ರಾರ್ಥನೆ, ದಐವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆ ನಡೆಯಲಿರುವುದು.
29ರಂದು ಸಂಜೆ ಶ್ರೀದೈವಗಳ ಭಂಡಾರದ ಅಗಮನ, ರಾತ್ರಿಎಳೆಯೋರ್ ದೈವ, 30ರಂದು ಬೆಳಗ್ಗೆ ಚಾಮುಂಡಿ ದಐವ, ಪಂಜುರ್ಲಿ(ಉಗ್ರಮೂರ್ತಿ)ದೈವ, ಸಂಜೆ ಮೂತೋರ್ ದೈವ, ರಾತ್ರಿ ಸುಡುಮದ್ದು ಪ್ರದರ್ಶನ, ಬಂಬೇರಿಯಾ, ಮಾಣಿಚ್ಚ ದಐವ ಕೋಲ ನಡೆಯುವುದು.
31ರಂದು ಬೆಳಗ್ಗೆ ಚಾಮುಂಡಿ ದಐವ, , ಕುಂಡಕಲೆಯ ದೈವಗಳ ಸಂಚಾರ, ಶ್ರೀ ಪಂಜುರ್ಲಿ, ರಾತ್ರಿ ಪಾಶಾಣಮೂರ್ತಿ ದೈವಕೋಲ ನಡೆಯುವುದು. ಜ.1ರಂದು ಬೆಳಗ್ಗೆ ಶ್ರೀ ರಕ್ತೇಶ್ವರೀ ದೈವ, ತುಲಾಭಾರ ಸೇವೆ, ಸಂಜೆ ಶ್ರೀ ವಿಷ್ಣುಮೂರ್ತಿ ದೈವ ಕೋಲ, ಪ್ರೇತ ವಿಮೋಚನೆ, 2ರಂದು ಬೆಳಗ್ಗೆ ರಕ್ತೇಶ್ವರೀ ದೈವ, ತುಲಾಭಾರ, ವಿಷ್ಣುಮೂರ್ತಿ ದೈವ, ಪ್ರೇತ ವಿಮೋಚನೆ ನಡೆಯುವುದು. 3ರಂದು ಬೆಳಗ್ಗೆ ಕಳಗ ಒಪ್ಪಿಸುವುದರ ಜತೆಗೆ ಭಂಡಾರ ನಿರ್ಗಮನದೊಂದಿಗೆ ಕಳಿಯಾಟ ಸಂಪನ್ನಗೊಳ್ಳಲಿದೆ.
28ರಿಂದ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ
0
ಡಿಸೆಂಬರ್ 19, 2022
Tags