ತ್ರಿಶೂರ್: ಗುರುವಾಯೂರಿನಲ್ಲಿ ಅನ್ನದಾನಕ್ಕಾಗಿ ಮುಖೇಶ್ ಅಂಬಾನಿ ಒಂದೂವರೆ ಕೋಟಿ ರೂ.ಕಾಣಿಕೆ ರೂಪದ ದೇಣಿಗೆ ಸಮರ್ಪಿಸಿರುವರು. ಏಕಾದಶಿಯಂದು ಅಂಬಾನಿ ನೈವೇದ್ಯ ಸಮರ್ಪಣಾ ಸೇವೆಯಾಗಿ(ಅನ್ನದಾನ)ಕಾಣಿಕೆ ಸಮರ್ಪಿಸಿದ್ದಾರೆ.
ದೇವಸ್ಥಾನದಲ್ಲಿ ಏಕಾದಶಿ 2 ದಿನದ ನೈವೇದ್ಯದ ಒಟ್ಟು ಆದಾಯ 2.95 ಕೋಟಿ ರೂ.ಆಗಿ ಈ ಮೂಲಕ ಹೆಚ್ಚಳಗೊಂಡಿದೆ. 2 ದಿನಗಳಲ್ಲಿ 5846 ಮಂದಿ ತುಪ್ಪದ ದೀಪ ಸೇವೆ ನಡೆಸಿದ್ದಾರೆ. ಈ ಮೂಲಕ 57.88 ಲಕ್ಷಗಳಷ್ಟು ಹಣ ಜಮೆಯಾಗಿದೆ. ಸರತಿ ಸಾಲಿನಲ್ಲಿ ನಿಲ್ಲದೆ ದರ್ಶನ ಪಡೆಯಲು ತುಪ್ಪದ ದೀಪ ನೈವೇದ್ಯದಿಂದ ಹೆಚ್ಚು ಆದಾಯ ಬರುತ್ತದೆ.
ಮೊನ್ನೆ ಮಧ್ಯರಾತ್ರಿ ದ್ವಾದಶಿ ಸಮರ್ಪಣೆ ನಡೆಯಿತು. ಕೂತಂಬಲಂನಲ್ಲಿ ಪೆರುವನಂ, ಶುಕಪುರಂ ಮತ್ತು ಇರಿಂಞಲಕುಡ ಗ್ರಾಮಗಳ ಅಗ್ನಿಹೋತ್ರಿಗಳಿಗೆ ದಕ್ಷಿಣೆ ಅರ್ಪಿಸುವ ಸಮಾರಂಭ ಇದಾಗಿದೆ. ಏಕಾದಶಿ ದಿನದಂದು ಸಾವಿರಾರು ಮಂದಿ ದೇವಸ್ಥಾನಕ್ಕೆ ಆಗಮಿಸಿದ್ದರು.
ಏಕಾದಶಿಯ ದಿನ ಬೆಳಗಿನ ಜಾವ 1ಗಂಟೆ ಮಾತ್ರ ಕಾಶ್ಮಶಿವೇಲಿ ನಡೆಯುವುದು ವಾಡಿಕೆ. ಆದರೆ ಏಕಾದಶಿಯ 2 ದಿನಗಳಿಂದ ಮೊನ್ನೆ ಬೆಳಗ್ಗೆ ಹಾಗೂ ಮಧ್ಯಾಹ್ನ ಉತ್ಸವ ನಡೆದು 3 ಬಾರಿ ಸ್ವರ್ಣಮೂರ್ತಿ ಬಲಿ ನಡೆಯಿತು. 2 ದಿನಗಳ ಕಾಲ ಗೋಧಿ ಅನ್ನ ಮತ್ತು ಉಪವಾಸದ ಆಹಾರವನ್ನೊಳಗೊಂಡ ಪ್ರಸಾದ ಊಟವನ್ನು ನೀಡಲಾಯಿತು. ಇದರಲ್ಲಿ ಅರ್ಧ ಮಿಲಿಯನ್‍ಗಿಂತಲೂ ಹೆಚ್ಚು ಜನರು ಭಾಗವಹಿಸಿದ್ದರು.
ಮುಖೇಶ್ ಅಂಬಾನಿಯಿಂದ ಗುರುವಾಯೂರ್ ಕಣ್ಣನಿಗೆಒಂದೂವರೆ ಕೋಟಿ ಕಾಣಿಕೆ ಸಮರ್ಪಣೆ: ಎರಡು ದಿನಗಳಲ್ಲಿ 2.95 ಕೋಟಿ ರೂ. ಆದಾಯ
0
ಡಿಸೆಂಬರ್ 05, 2022