HEALTH TIPS

ಜ. 29ರವರೆಗೆ ರಾಮೋಜಿ ಫಿಲ್ಮ್​ ಸಿಟಿಯಿಂದ ಆಕರ್ಷಕ ವಿಂಟರ್​ ಫೆಸ್ಟ್​ ಆಯೋಜನೆ: ಕ್ರಿಸ್​ಮಸ್​, ಹೊಸ ವರ್ಷದ ಮೋಜಿನ ಹಬ್ಬ

 

             ಪ್ರಸಿದ್ಧ ಪ್ರವಾಸಿ ಮತ್ತು ಮನರಂಜನಾ ಕೇಂದ್ರವಾಗಿರುವ ಪ್ರಪಂಚದ ಅತಿ ದೊಡ್ಡ ಸಂಘಟಿತ ಚಲನಚಿತ್ರ ಸ್ಟುಡಿಯೋ ಸಂಕೀರ್ಣ ರಾಮೋಜಿ ಫಿಲ್ಮ್​ ಸಿಟಿ (ಆರ್​ಎಫ್​ಸಿ)ಯು 2023ರ ಜನವರಿ 29ರವರೆಗೆ 46 ದಿನಗಳ ಸುದೀರ್ಘ 'ವಿಂಟರ್ ಫೆಸ್ಟ್' ಆಯೋಜಿಸಿದ್ದು, ಈ ಋತುವಿನ ಅತ್ಯುತ್ತಮ ವಿನೋದ ಮತ್ತು ಮೋಜಿನ ಹಬ್ಬವನ್ನು ನಿಮ್ಮೆಲ್ಲರ ಮುಂದೆ ಪ್ರಸ್ತುತಪಡಿಸುತ್ತಿದೆ.

                 ಸಿನಿಮಾ ಕ್ಷೇತ್ರದ ಮಾಯಾಲೋಕವಾಗಿರುವ ಆರ್​ಎಫ್​ಸಿ, ರಜೆಯ ಮೋಜು ಅಥವಾ ವಿರಾಮದ ಕ್ಷಣಗಳನ್ನು ಮಧುರವಾಗಿಸುವ ಹಾಟ್​ಸ್ಪಾಟ್​ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್​ಮಸ್​ ಮತ್ತು 2023ರ ಹೊಸವರ್ಷಾಚರಣೆ ಎದುರಾಗಲಿದ್ದು, ಈ ರಜೆಯ ಕ್ಷಣದ ಖುಷಿಯನ್ನು ನೂರ್ಮಡಿಗೊಳಿಸಲು ಆರ್​ಎಫ್​ಸಿಯು ವಿಶೇಷ ಆಫರ್​ ಅನ್ನು ಪ್ರವಾಸಿಗರಿಗಾಗಿ ಹೊರತಂದಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅಂತಾರಾಷ್ಟ್ರೀಯ ಪ್ಲೇವರ್​ನೊಂದಿಗೆ ವಿಷಯಾಧಾರಿತ ಮನರಂಜನೆಯನ್ನು ಅನುಭವಿಸುವ ಮೂಲಕ ಅತಿಥಿಗಳು ವಿಶೇಷ ರಜಾ ಕ್ಷಣವನ್ನು ಸಂಭ್ರಮಿಸಬಹುದಾಗಿದೆ.

                             ಆರ್​ಎಫ್​ಸಿ ಮೋಜಿನ ಹಬ್ಬದ ಪ್ರಮುಖಾಂಶಗಳು ಹೀಗಿದೆ…
1. ಪ್ರಪಂಚದಾದ್ಯಂತ ಇರುವ ಚಳಿಗಾಲ ಆಧಾರಿತ ಮನರಂಜನೆ
46 ದಿನಗಳ ವಿಂಟರ್ ಫೆಸ್ಟ್, ವಿಶೇಷವಾಗಿ ಪ್ರಪಂಚದಾದ್ಯಂತದ ವಿಷಯಾಧಾರಿತ ಮನರಂಜನೆಯನ್ನು ಒದಗಿಸುತ್ತದೆ. ಬ್ರೆಜಿಲಿಯನ್ ಸಾಂಬಾದಿಂದ ಕ್ವಿಬೆಕ್‌ನ ಪ್ರಸಿದ್ಧ ಚಳಿಗಾಲದ ಆಚರಣೆಯ ವಿಶೇಷ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತದೆ.

2. ಕಾರ್ನಿವಲ್​ ಪರೇಡ್​ ಮತ್ತು ವಿಶೇಷ ಸಂಜೆಯ ಮೋಜು
ಆರ್​ಎಫ್​ಜಿ ಘೋಷಿಸಿರುವ ವಿಂಟರ್​ ಫೆಸ್ಟ್​ ಅವಧಿಯಲ್ಲಿ ಸಂಜೆಯ ಸಮಯದಲ್ಲಿ ಅಲಂಕೃತ ಕಾರ್ನಿವಲ್​ ಸ್ಥಬ್ಧಚಿತ್ರಗಳು ಆರ್​ಎಫ್​ಸಿಯ ಫ್ಯಾಂಟಸಿ ಮಾರ್ಗಗಳಲ್ಲಿ ಮೆರವಣಿಗೆ ಸಾಗುತ್ತದೆ. ಈ ವೇಳೆ ನೃತ್ಯ ತಂಡ, ಸ್ಟಿಲ್ಟ್ ವಾಕರ್‌ಗಳು (ಮರಗಾಲಿನಲ್ಲಿ ನಡೆಯುವುದು), ಜಗ್ಲರ್‌ಗಳು ಮತ್ತು ನೇರ ಪ್ರದರ್ಶನ ನೀಡುವ ವಿದೂಷಕರು ಮೆರವಣಿಗೆಯಲ್ಲಿ ತಮ್ಮ ಪ್ರದರ್ಶನ ನೀಡುವ ಮೂಲಕ ಕಾರ್ನಿವಲ್ ವಿನೋದವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಬೆರಗುಗೊಳಿಸುವ ದೀಪಗಳಿಂದ ಅಲಂಕರಿಸಲ್ಪಟ್ಟ ಉದ್ಯಾನಗಳು ಮತ್ತು ಮಾರ್ಗಗಳು ಸಂಪೂರ್ಣವಾಗಿ ಮಾಯಲೋಕದ ಅನುಭವವನ್ನು ನೀಡಲಿವೆ.

3. ಪ್ರತಿದಿನವು ಹೊಸ ಡಿಜೆ
ವಿಂಟರ್​ ಫೆಸ್ಟ್​ ನಡೆಯುವ 46 ದಿನಗಳವರೆಗೂ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮೋಜು ಮಾಡಲು ಸಂಜೆಯ ಮನರಂಜನಾ ಕ್ಷಣವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಪ್ರತಿದಿನವು ಹೊಸ ಹೊಸ ಡಿಜೆಯು, ಪಾರ್ಟಿ ಮೂಡ್​ ಅನ್ನು ಉತ್ತೇಜಿಸುವ ಮೂಲಕ ಅತಿಥಿಗಳು ಅಥವಾ ಪ್ರವಾಸಿಗರು ಡಿಜೆಯ ತಾಳಕ್ಕೆ ಹೆಜ್ಜೆ ಹಾಕಬಹುದಾಗಿದೆ. ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಸುವರ್ಣಾವಕಾಶ ಸಿಗಲಿದೆ.

4. ಬೋನ್​​ಫೈರ್​ ಮತ್ತು ಬಾರ್ಬೆಕ್ಯೂ
ವಿಂಟರ್​ ಫೆಸ್ಟ್​ನಲ್ಲಿ ಚಳಿಗೆ ಮುಕ್ತಿ ನೀಡಲು ಆಕರ್ಷಕ ಸಂಜೆಯ ಪ್ಯಾಕೇಜ್​ಗಳನ್ನು ಡಿಸೈನ್​ ಮಾಡಲಾಗಿದೆ. ಈ ಪ್ಯಾಕೇಜ್​ನಲ್ಲಿ ಲೈವ್​ ಡಿಜೆಯೊಂದಿಗೆ ಬೋನ್​ಫೈರ್​ (ಬಯಲುರಿ ಅಥವಾ ಕಟ್ಟಿಗೆಯ ಬೆಂಕಿಯಲ್ಲಿ ಚಳಿಯನ್ನು ತಣಿಸುವುದು) ಮತ್ತು ಬಾರ್ಬೆಕ್ಯೂ ಡಿನ್ನರ್​ (ಹೊರಾಂಗಣದ ಭರ್ಜರಿ ಔತಣಕೂಟ) ಹೊಂದುವ ಮೂಲಕ ಅಮೋಘ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

                 ವಿಂಟರ್​ ಫೆಸ್ಟ್​ನಲ್ಲಿ ಆರ್​ಎಫ್​ಸಿಗೆ ಭೇಟಿ ನೀಡಲಿರುವ ಅತಿಥಿಗಳ ಅನುಕೂಲಕ್ಕೆ ತಕ್ಕಂತೆ ವಿವಿಧ ಪ್ಯಾಕೇಜ್‌ಗಳನ್ನು (ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ) ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

5. ಆಕರ್ಷಕ ವಾಸ್ತವ್ಯದ ಪ್ಯಾಕೇಜ್‌
ಐಷಾರಾಮಿ ಹೋಟೆಲ್ - ಸಿತಾರಾ, ಆರಾಮದಾಯಕ ಹೋಟೆಲ್ - ತಾರಾ, ಶಾಂತಿನಿಕೇತನ - ಬಜೆಟ್ ಹೋಟೆಲ್, ವಸುಂಧರಾ ವಿಲ್ಲಾ - ಫಾರ್ಮ್ ಹೌಸ್, ಗ್ರೀನ್ಸ್ ಇನ್ - ಸ್ನೇಹಶೀಲ ವಸತಿ ಮತ್ತು ಹೋಟೆಲ್ ಸಹಾರಾ - ಹಂಚಿಕೆಯ ವಸತಿ ಹೋಟೆಲ್​ಗಳು ಅತ್ಯುತ್ತಮವಾದ ಹಲವಾರು ಆಕರ್ಷಕ ಸ್ಟೇ ಪ್ಯಾಕೇಜ್‌ಗಳನ್ನು ಹೊಂದಿದ್ದು, ವಿಂಟರ್​ ಫೆಸ್ಟ್​ ಸಂಭ್ರಮವನ್ನು ದ್ವಿಗುಣಗೊಳಿಸಲಿವೆ.

ಹೆಚ್ಚಿನ ಮಾಹಿತಿಗಾಗಿ www.ramojifilmcity.comವೆಬ್​ಸೈಟ್​ಗೆ ಲಾಗಿನ್​ ಮಾಡಿ ಅಥವಾ 1800 120 2999 ದೂರವಾಣಿ ಸಂಖ್ಯೆಗೆ ಕರೆ ಮಾಡಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries