ಮಂಜೇಶ್ವರ : ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಪದ್ದತಿ ಪ್ರಕಾರ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ವಾಚನ ಸ್ಪರ್ಧೆ ಡಿಸೆಂಬರ್ 31 ರಂದು ಕುಂಬಳೆ ಸರ್ಕಾರಿ ಹೈಸ್ಕೂಲ್‍ನಲ್ಲಿ ಬೆಳಗ್ಗೆ 10 ರಿಂದ ನಡೆಯಲಿದೆ. ರಾಜ್ಯ ಲೈಬ್ರೆರಿ ಕೌನ್ಸಿಲ್ ಅಂಗೀಕಾರವಿರುವ ಗ್ರಂಥಾಲಯಗಳಿಂದ ಆಯ್ಕೆಯಾದ ಯು .ಪಿ ಮತ್ತು ಹಿರಿಯರ ವಿಭಾಗದ ಸ್ಪರ್ಧಾಳುಗಳು ಜಿಲ್ಲಾ ಮಟ್ಟದ ಕನ್ನಡ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೈಸ್ಕೂಲ್ ಶಾಲಾ ಮಟ್ಟದಲ್ಲಿ ಆಯ್ಕೆಯಾದ ಮಕ್ಕಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಬೇಕು.
ಹೈಸ್ಕೂಲ್ ವಿಭಾಗಗಕ್ಕೆ ಪ್ರತಿ ವ್ಯೂಹ, ನೆಲ ಸಂಪಿಗೆ, ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ, ಅಕ್ಷರ ಮತ್ತು ಆಕಾಶ, ಬಂಜೆತನ ಬಯಸಿದವಳು, ಯು ಪಿ ವಿಭಾಗಗಕ್ಕೆ ನೋವಿಗದ್ದಿದ ಕುಂಚ, ಮಾಡಿದರೆ ಮಾಡಬೇಕು ಅಂಥ ಯುದ್ಧ, ಅನುಭೂತಿ ಸಹಾನುಭೂತಿ , ಸರಸ್ವತಿ ನದಿ, ಪುರಾಣ ಇತಿಹಾಸ ವಿಜ್ಞಾನ, ವನ ಸುಮ, ಎಕೆಜಿ ಜೀವನ ಚರಿತ್ರೆ, ಹಿರಿಯರ ವಿಭಾಗಗಕ್ಕೆ ಇದು ಬರಿ ಮಣ್ಣಲ್ಲ, ನವಿಲುಗರಿ, ಅಗ್ಗಿಷ್ಟಿಕೆ, ಮುಟ್ಟು ಏನಿದರ ಒಳಗುಟ್ಟು, ಅದು ನಿಜವಲ್ಲ ಎಂಬ ಪುಸ್ತಕಗಳಿಂದ ಪ್ರಶ್ನೆ ಪತ್ರಿಕೆ ತಯಾರಿಸಲಾಗುವುದು.
ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ವಾಚನ ಸ್ಪರ್ಧೆ ಡಿಸೆಂಬರ್ 31 ರಂದು
0
ಡಿಸೆಂಬರ್ 27, 2022
Tags