ಕಾಸರಗೋಡು: ಸುಲೇಖಾ ಯೆನೆಪೆÇಯ ಇನ್‍ಸ್ಟಿಟ್ಯೂಟ್ ಆಫ್ ಆಂಕೊಲಾಜಿ ತನ್ನ ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯದ ನವೀಕೃತ ಎಸ್‍ಪಿಇಸಿಟಿ ಸವಲತ್ತಿನ ಉದ್ಘಾಟನೆ ಡಿ. 31ರಂದು ಇಎಂಡಿ ಬಿಲ್ಡಿಂಗ್ ಆಡಿಟೋರಿಯಂ ಹಾಲ್‍ನಲ್ಲಿ ಜರುಗಲಿರುವುದಾಗಿ ಆಸ್ಪತ್ರೆಯ ಆಂಕಾಲಜಿ ವಿಭಾಗ ಮುಖ್ಯಸ್ಥ ಡಾ. ಜಲಾಲುದ್ದಿನ್ ಅಕ್ಬರ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಸದಸ್ಯ ರಾಜಮೋಹನ್ ಉನ್ಣಿತ್ತಾನ್ ಮುಖ್ಯ ಅತಿಥಿಯಾಘಿ ಭಾಗವಹಿಸುವರು. ಯೆನೆಪೆÇಯ ವಿಶ್ವವಿದ್ಯಾಲಯದ ಕುಲಪತಿ ಯೆನೆಪೆÇಯ ಅಬ್ದುಲ್ಲಕುಞÂ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎನ್.ಎ.ನೆಲ್ಲಿಕುನ್, ಎ.ಕೆ.ಎಂ.ಅಶ್ರಫ್, ಸಿ.ಎಚ್.ಕುಞಂಬು, ಉಪಕುಲಪತಿ ಡಾ.ಎಂ. ವಿಜಯಕುಮಾರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಲೇಖಾ ಯೆನೆಪೆÇೀಯಾ ಇನ್‍ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಯೆನೆಪೆÇಯ ವಿಶ್ವವಿದ್ಯಾನಿಲಯದ ಘಟಕ ಆಸ್ಪತ್ರೆಯ ಕಳೆದ ದಶಕದಿಂದ ಕ್ಯಾನ್ಸರ್ ರೋಗಿಗಳಿಗೆ ತನ್ನ ತಜ್ಞರ ತಂಡ ಮತ್ತು ಇತ್ತೀಚಿನ ತಂತ್ರಜ್ಞಾನದೊಂದಿಗೆ ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ಸೇವೆ ಸಲ್ಲಿಸುತ್ತಿದೆ. ಟಾಟಾ ಟ್ರಸ್ಟ್‍ನ ಬೆಂಬಲದೊಂದಿಗೆ ಸುಲೇಖಾ ನೆಪೆÇೀಯಾ ಆಂಕೊಲಾಜಿ ಸಂಸ್ಥೆಯ ಸ್ಥಾಪನೆಯು ವಿಶ್ವವಿದ್ಯಾನಿಲಯವು ಸಾಧಿಸಿದ ಹೊಸ ಮೈಲಿಗಲ್ಲಾಗಿದೆ. ಕರಾವಳಿಯ ಮತ್ತು ಉತ್ತರ ಕೇರಳವನ್ನು ಒಳಗೊಂಡಿರುವ ಪ್ರದೇಶದ ಅರ್ಬುದಪೀಡಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ.
ಯೆನೆಪೆÇಯ ವಿಶ್ವವಿದ್ಯಾನಿಲಯವು ರೇಡಿಯೊ ಐಸೋಟೋಪ್‍ಗಳನ್ನು ಬಳಸಿಕೊಂಡು ಥೈರಾಯ್ಡ್, ಮೂತ್ರಪಿಂಡ, ಮೂಳೆ, ಹೃದಯ ಇತ್ಯಾದಿಗಳನ್ನು ಅಧ್ಯಯನ ಮಾಡಲು ಬಳಸುವ ಎಸ್‍ಪಿಇಸಿಟಿ ಉಪಕರಣಗಳನ್ನು ಸ್ಥಾಪಿಸಲಾಗಿದ್ದು, ಈ ಯಂತ್ರಗಳು ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಶಫೀಕ್, ಮಹಮ್ಮದ್ ಸಾಲಿ ಉಪಸ್ಥಿತರಿದ್ದರು.
ಯೆನೆಪೋಯ ಆಸ್ಪತ್ರೆಯಲ್ಲಿ 31ರಂದು ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯದ ನವೀಕೃತ ಎಸ್‍ಪಿಇಸಿಟಿ ಸವಲತ್ತಿನ ಉದ್ಘಾಟನೆ
0
ಡಿಸೆಂಬರ್ 28, 2022
Tags