ಕಾಸರಗೋಡು: ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ರೈತರು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್‍ನೊಂದಿಗೆ ಲಿಂಕ್ ಮಾಡಬೇಕಾಗಿದೆ. ಖಇಐIS ಪೆÇೀರ್ಟಲ್‍ನಲ್ಲಿ ಕೃಷಿ ಭೂಮಿಯ ಕುರಿತಾದ ಮಾಹಿತಿ ಆರ್‍ಇಎಲ್‍ಐಎಸ್ ಪೋರ್ಟಲ್‍ನಲ್ಲಿರುವ ಪಿ.ಎಂ ಕಿಸಾಣ್ ಫಲಾನುಭವಿಗಳು ತಮ್ಮ ಸವಂತ ಕೃಷಿಭೂಮಿಯ ಮಾಹಿತಿಯನ್ನು ಸಲ್ಲಿಸಬೇಕು. ರಾಜ್ಯ ಕೃಷಿ ಇಲಾಖೆಯ ಪೆÇೀರ್ಟಲ್ 'ಏಮ್ಸ್' ನಲ್ಲೂ ಇದಕ್ಕಾಗಿ ಸೌಲಭ್ಯವನ್ನು ಒದಗಿಸಲಾಗಿದೆ. ಪಿಎಂ ಕಿಸಾನ್ ಪ್ರಯೋಜನಗಳನ್ನು ಮತ್ತಷ್ಟು ಪಡೆದುಕೊಳ್ಳಲು ಪಿಎಂ ಕಿಸಾನ್‍ನ ಎಲ್ಲಾ ಫಲಾನುಭವಿಗಳು ತಕ್ಷಣವೇ ತಮ್ಮ ಜಮೀನಿನ ವಿವರಗಳನ್ನು ಏಮ್ಸ್ ಪೆÇೀರ್ಟಲ್‍ನಲ್ಲಿ ಸೇರಿಸಬೇಕು. ಖಇಐIS ಪೆÇೀರ್ಟಲ್‍ನಲ್ಲಿ ಇಲ್ಲದವರು ಅವರ ಅರ್ಜಿ ಮತ್ತು ಸ್ಥಳದ ವಿವರ, ಹಕ್ಕುಪತ್ರ, ಅರಣ್ಯ ಹಕ್ಕುಗಳ ದಾಖಲೆಯನ್ನು ನೇರವಾಗಿ ಕೃಷಿ ಭವನದಲ್ಲಿ ಸಲ್ಲಿಸಬೇಕಾಗಿದೆ. ಪಿಎಂ ಕಿಸಾನ್‍ನಲ್ಲಿ ನೋಂದಾಯಿತ ರೈತರಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದ್ದು, ಪಿಎಂ ಕಿಸಾನ್‍ನ ಎಲ್ಲಾ ಫಲಾನುಭವಿಗಳು ಪಿಎಂ ಕಿಸಾನ್ ಪೆÇೀರ್ಟಲ್ ಅಥವಾ ಅಕ್ಷಯ ಸಿಎಸ್‍ಸಿಯಂತಹ ಜನ ಸೇವಾ ಕೇಂದ್ರಗಳ ಮೂಲಕ ಡಿಸೆಂಬರ್ 31 ರೊಳಗೆ ಇ-ಕೆವೈಸಿ ಮಾಡಬೇಕು. ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳು ಮೊತ್ತದ ನೇರ ವರ್ಗಾವಣೆಯನ್ನು ಪಡೆಯಲು ಬ್ಯಾಂಕ್‍ನೊಂದಿಗೆ ತಮ್ಮ ಬ್ಯಾಂಕ್ ಖಾತೆಯನ್ನು ಜೋಡಣೆಗೊಳಿಸಬೇಕು. ಪಿಎಂ ಕಿಸಾನ್ ಯೋಜನೆಗೆ ಇನ್ನೂ ಸೇರಿರದ ಅರ್ಹ ಕೃಷಿಕರು ಆನ್‍ಲೈನ್‍ನಲ್ಲಿ ಖುದ್ದಾಗಿ ಅಥವಾ ಅಕ್ಷಯ ಯಾ ಸಾರ್ವಜನಿಕ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪಿಎಂ ಕಿಸಾನ್ ಯೋಜನೆ ಸವಲತ್ತಿಗಾಗಿ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ
0
ಡಿಸೆಂಬರ್ 30, 2022