ನವದೆಹಲಿ:ಭಾರತೀಯ ನೌಕಾಪಡೆಯು 2047 ರ ವೇಳೆಗೆ 'ಆತ್ಮನಿರ್ಭರ್' (ಸ್ವಾವಲಂಬಿ) ಆಗಲಿದೆ ಎಂದು ಸರಕಾರಕ್ಕೆ ಭರವಸೆ ನೀಡಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ Chief of Naval Staff Admiral R Hari Kumar ಹೇಳಿದ್ದಾರೆ.
ನೌಕಾಪಡೆಯ ದಿನದ ಮೊದಲು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿವಿಧ ಮಿಲಿಟರಿ ಹಾಗೂ ಸಂಶೋಧನಾ ಹಡಗುಗಳ ಚಲನವಲನಗಳ ಮೇಲೆ ನೌಕಾಪಡೆಯು ತೀವ್ರವಾದ ನಿಗಾ ಇರಿಸುತ್ತದೆ ಎಂದು ಹೇಳಿದರು.
ಅಗ್ನಿವೀರ್ ಯೋಜನೆಯಡಿಯಲ್ಲಿ ನೌಕಾಪಡೆಗೆ ಸುಮಾರು 3,000 ಅಗ್ನಿವೀರ್‌ಗಳು ಆಗಮಿಸಿದ್ದು, ಅವರಲ್ಲಿ 341 ಮಹಿಳೆಯರನ್ನು ಮೊದಲ ಬಾರಿಗೆ ನಾವಿಕರನ್ನಾಗಿ ಸೇರ್ಪಡೆಗೊಳಿಸುತ್ತಿದ್ದೇವೆ ಎಂದು ಅಡ್ಮಿರಲ್ ಕುಮಾರ್ ಹೇಳಿದರು.