ನವದಹೆಲಿ: ಈ ವರ್ಷದ ಏಪ್ರಿಲ್‌ನಿಂದ ಇಲ್ಲಿಲಿಯವರೆಗೆ ಪಿಂಚಣಿಗೆ ಸಂಬಂಧಿತ 36,700 ಕುಂದುಕೊರತೆಗಳ ದೂರು ದಾಖಲಾಗಿವೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದರು.
ತಡವಾಗಿ ಮತ್ತು ಸರಿಯಾಗಿ ಪಿಂಚಣಿ ಪಾವತಿಯಾಗದೇ ಇರುವ ಕುರಿತಾ ಹಾಗೂ ನಿವೃತ್ತಿ ವೇತನಕ್ಕೆ ಸಂಬಂಧಿಸಿದ 11,891 ದೂರುಗಳು ಬಂದಿದ್ದರೆ, 3,803 ಪಿಂಚಣಿ ಪಾವತಿಯಾಗದೇ ಬಾಕಿ ಇರುವ ಬಗ್ಗೆ ದೂರುಗಳು 'ಕೇಂದ್ರೀಕೃತ ಪಿಂಚಣಿ ಕುಂದುಕೊರತೆಗಳ ಪರಿಹಾರ ಮತ್ತು ಮಾನಿಟರಿಂಗ್ ವ್ಯವಸ್ಥೆ'ಯಲ್ಲಿ ದಾಖಲಾಗಿವೆ ಎಂದು ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.