ನವದೆಹಲಿ: ಭಾರತದಲ್ಲಿ ಡಿಜಿಟಲ್ ಪಾವತಿಯ ವಹಿವಾಟು ದಿನೇ ದಿನೆ ಹೆಚ್ಚುತ್ತಿದ್ದು ಪ್ರಸ್ತಕ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಈವರೆಗೆ 2,300 ಕೋಟಿ ವಹಿವಾಟು ನಡೆದಿದ್ದು, 38.30 ಲಕ್ಷ ಕೋಟಿ ರೂ. ಪಾವತಿ ಆಗಿದೆ. ಈ ಪಾವತಿಗಳು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಪೂರ್ವಪಾವತಿ ವೇದಿಕೆ, ಮೊಬೈಲ್ ವ್ಯಾಲೆಟ್ಗಳ ಮೂಲಕ ನಡೆದಿದೆ ಎಂದು ವರ್ಲ್ಡ್ಲೈನ್ ಇಂಡಿಯಾ ಡಿಜಿಟಲ್ ಪೇಮೆಂಟ್ ವರದಿ ತಿಳಿಸಿದೆ.
ಚಿನ್ನ-ಬೆಳ್ಳಿ ದರ ಏರಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 227 ರೂ. ಏರಿಕೆ ಆಗಿದ್ದು, 10 ಗ್ರಾಂ ಬೆಲೆ 54,386 ರೂ.ಗೆ ತಲುಪಿದೆ. ಬೆಳ್ಳಿ ಬೆಲೆ 1,166 ರೂ. ಹೆಚ್ಚಳ ಆಗಿದ್ದು, ಕೆ.ಜಿ. ದರ 62,270 ರೂ.ಗೆ ಜಿಗಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 52 ಪೈಸೆ ಕುಸಿತವಾಗಿದ್ದು, 81.85 ರೂ. ವಿನಿಮಯ ದರ ಸ್ಥಿರವಾಗಿದೆ.
ಸೇವಾ ವಲಯದಲ್ಲಿ ಚಟುವಟಿಕೆ ವೃದ್ಧಿ: ಎಸ್ ಆಯಂಡ್ ಪಿ ಗ್ಲೋಬಲ್ ಬಿಡುಗಡೆ ಮಾಡಿರುವ ಖರೀದಿ ಮ್ಯಾನೇಜರ್ ಸೂಚ್ಯಂಕದಲ್ಲಿ (ಪಿಎಂಐ) ನವೆಂಬರ್ನಲ್ಲಿ ಸೇವಾ ವಲಯದ ಚಟುವಟಿಕೆ ಶೇ. 56.4 ವೃದ್ಧಿಸಿದೆ. ಇದು 3 ತಿಂಗಳಲ್ಲೇ ಅತ್ಯಧಿಕ ಮಟ್ಟದ್ದಾಗಿದೆ. ಅಕ್ಟೋಬರ್ನಲ್ಲಿ ಇದು ಶೇ. 55.1 ಇತ್ತು.