ನವದೆಹಲಿ: 2021-22ನೇ ಸಾಲಿನಲ್ಲಿ ಒಟ್ಟು 60,202 ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟುಗಳಿದ್ದು, ಕೌನ್ಸೆಲಿಂಗ್ ಬಳಿಕವೂ 3,744 ಸೀಟುಗಳು ಖಾಲಿ ಉಳಿದಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ರಾಜ್ಯಸಭೆಗೆ ಮಂಗಳವಾರ ತಿಳಿಸಿದರು.
92,065 ವೈದ್ಯಕೀಯ ಪದವಿ ಸೀಟಗಳಿದ್ದು, ಕೌನ್ಸೆಲಿಂಗ್ ಬಳಿಕ 197 ಸೀಟುಗಳು ಬಾಕಿ ಉಳಿದಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವರದಿಯ ಪ್ರಕಾರ 2021ರ ಯುಜಿ ನೀಟ್ ಪರೀಕ್ಷೆಗೆ 15,44,273 ಪರೀಕ್ಷಾರ್ಥಿಗಳಿದ್ದರು, ಅದೇ 2022ರಲ್ಲಿ 17,64,571 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಹೇಳಿದ್ದಾರೆ.
2020-21ರಲ್ಲಿ 1,425 ಪಿಜಿ ಸೀಟುಗಳು, 2019-20ರಲ್ಲಿ 4,614 ಸೀಟುಗಳು ಖಾಲಿ ಉಳಿದಿದಿದ್ದವು ಎಂದು ಮಾಹಿತಿ ನೀಡಿದ್ದಾರೆ.