ಹೈದರಾಬಾದ್: ಇಲ್ಲಿನ ಕಾಮಾರೆಡ್ಡಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬಂಡೆಗಳ ಮಧ್ಯೆ ಕಿರಿದಾದ ಪ್ರದೇಶದಲ್ಲಿ ಸಿಲುಕಿದ್ದ 36 ವರ್ಷದ ವ್ಯಕ್ತಿಯನ್ನು ಮೂರು ದಿನಗಳ ಬಳಿಕ ಗುರುವಾರ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.
ರೆಡ್ಡಿಪೇಟ್ ಗ್ರಾಮದ ಸಿ.ರಾಜು ಅವರು ಮಂಗಳವಾರ ಸ್ನೇಹಿತರೊಂದಿಗೆ ಅರಣ್ಯ ಪ್ರದೇಶಕ್ಕೆ ತೆರಳಿದ್ದರು.ಈ ವೇಳೆ ಬಂಡೆಗಳ ನಡುವಿನ ಕಿರಿದಾದ ಜಾಗದಲ್ಲಿ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋಗಿ ತಾವೇ ಸಿಲುಕಿದ್ದರು.