ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಶ್ರೀ ಅಯ್ಯಪ್ಪ ಸೇವಾಸಂಘದ 41ನೇ ವಾರ್ಷಿಕೋತ್ಸವ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಡಿ.30ರಿಂದ 2023 ಜನವರಿ 2ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಡಿ..30ರಂದು ಶುಕ್ರವಾರ ಬೆಳಗ್ಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಹೊರಟು ಬದಿಯಡ್ಕ ನೀರ್ಚಾಲು ದಾರಿಯಾಗಿ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಮಂದಿರ ಮೂಲಕ ಮಾನ್ಯ ತಲುಪಲಿರುವುದು. ಉಗ್ರಾಣ ತುಂಬಿಸುವುದು, ಅನ್ನದಾನ, ಸಂಜೆ 5 ಗಂಟೆಗೆ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. 5.30ರಿಂದ ನರ್ತಕಿ ನೃತ್ಯ ವಿದ್ಯಾಲಯ ಮಾನ್ಯ ಇವರಿಂದ ನೃತ್ಯ ವೈಭÀವ, 7.30ರಿಂದ ಕಲ್ಲಡ್ಕ ವಿಠ್ಠಲ ನಾಯಕ್ ಮತ್ತು ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿರುವುದು. ಖ.31ರಂದು ಬೆಳಗ್ಗೆ ಶರಣಂ ವಿಳಿ, ಗಣಪತಿಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ, ಅನ್ನದಾನ, ಸಂಜೆ 5.30ಕ್ಕೆ ತಾಯಂಬಕ, 6.30ಕ್ಕೆ ಕುಣಿತ ಭಜನೆ, 7 ರಿಂದ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ಕ್ಷೇತ್ರ ದೇವರಕೆರೆಯಿಂದ ಶ್ರೀ ಮಂದಿರಕ್ಕೆ ಉಲ್ಪೆ ಮೆರವಣಿಗೆ ಪ್ರಾರಂಭ, 9 ಕ್ಕೆ ಮಹಾಪೂಜೆ, ಅನ್ನದಾನ, ರಾತ್ರಿ 10 ರಿಂದ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಜ.1ರಂದು ಪ್ರಾತಃಕಾಲ ಗಣಪತಿ ಹೋಮ, ಶರಣಂ ವಿಳಿ, ಹರಿನಾಮ ಸಂಕೀರ್ತನೆ,ಸಹಸ್ರನಾಮಾರ್ಚನೆ,ಭಜನೆ, 9.30ಕ್ಕೆ ಎಡನೀರು ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ, 10 ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಲಿದ್ದಾರೆ. ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಮಾನ್ಯ ಶ್ರೀ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಶಂಕರ ದೇವಾಂಗ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ವೈದ್ಯ ಡಾ. ಜನಾರ್ದನ ನಾಯ್ಕ್ ಸಿ.ಎಚ್., ಗ್ರಾಮಾಭಿವೃದ್ದಿ ಯೋಜಾನಾಧಿಕಾರಿ ಮುಕೇಶ್ ಗಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ ಶರಣಂ ವಿಳಿ, ಮಹಾಪೂಜೆ, ಅನ್ನದಾನ, 1.30ರಿಂದ ವಿದುಷಿ ಗೀತಾ ಸಾರಡ್ಕ ಮತ್ತು ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ 7 ಕ್ಕೆ ಉಳ್ಳೋಡಿ ಶ್ರೀ ಕೊರಗ ತನಿಯ ಕ್ಷೇತ್ರದಿಂದ ಪ್ರಾರಂಭಗೊಂಡು ಶ್ರೀ ಮಂದಿರದ ಉತ್ಸವ ಸ್ಥಳಕ್ಕೆ ಪಾಲಕೊಂಬು ಮೆರವಣಿಗೆ, 7.30ರಿಂದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ಭಕ್ತಿಗಾನಸುಧಾ, 9.30ಕ್ಕೆ ಮಹಾಪೂಜೆ, 10.30ರಿಂದ ವೈಷ್ಣವೀ ನಾಟ್ಯಾಲಯ ಪುತ್ತೂರು ಇವರ ಬದಿಯಡ್ಕ ಶಾಖಾ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಭರತನಾಟ್ಯ ರೂಪಕ ನಡೆಯಲಿದೆ. ಡಿ.2ರಂದು ಪ್ರಾತಃಕಾಲ ಶ್ರೀ ಅಯ್ಯಪ್ಪ ಗೀತೆ, ಬೇಟೆವಿಳಿ, ಅಗ್ನಿಪೂಜೆ, ಕೆಂಡಸೇವೆ, ತಿರಿವುಯಿಚ್ಚಲ್, ಅಯ್ಯಪ್ಪ ವಾವರ ಯುದ್ಧ, ಬೆಳಗ್ಗೆ 5 ಕ್ಕೆ ಶರಣಂ ವಿಳಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಇಂದಿನಿಂದ ಮಾನ್ಯ ಶ್ರೀ ಅಯ್ಯಪ್ಪ ಸೇವಾಸಂಘದ 41ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ
0
ಡಿಸೆಂಬರ್ 30, 2022