ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ 43ನೇ ವಾರ್ಷಿಕೋತ್ಸವವು ಡಿ. .27 ಮತ್ತು 28ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಡಿ.27ರಂದು ಸಂಜೆ ವಾಸ್ತುಪೂಜೆ, ಸ್ಥಳೀಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಪ್ರದರ್ಶನಗೊಂಡಿತು.
ಇಂದು (ಡಿ.28) ಬೆಳಗ್ಗೆ ಮಹಾಗಣಪತಿ ಹೋಮ, ದೀಪ ಪ್ರತಿಷ್ಠೆ, ವಿವಿಧ ಭಜನಾ ಸಂಘಗಳಿಂದ ಭಜನೆ, 10.30ಕ್ಕೆ ಮಾಣಿಲ ಶ್ರೀಧಾಮದ ಕರ್ಮಯೋಗಿ ಯೋಗಿಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಆಗಮನ, ಪೂರ್ಣಕುಂಭ ಸ್ವಾಗತ, ಉಪಕಟ್ಟಡದ ಉದ್ಘಾಟನೆ, ಧಾರ್ಮಿಕ ಸಭೆ ನಡೆಯಲಿದೆ. ಶ್ರೀಧರ್ಮಶಾಸ್ತಾ ಸೇವಾಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ಶ್ರೀಸ್ವಾಮೀಜಿಯವರಿಂದ ಆಶೀರ್ವಚನ, ಗೌರವ ಉಪಸ್ಥಿತಿ ವಾಸ್ತುಶಿಲ್ಪಿ ಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ ಪಾಲ್ಗೊಳ್ಳಲಿದ್ದಾರೆ. ಸೇವಾಸಮಿತಿಯ ಅಧ್ಯಕ್ಷ ಉದಯಕುಮಾರ್ ಮೈಕುರಿ, ಮಂದಿರದ ಗುರುಸ್ವಾಮಿ ರಮೇಶ ಆಚಾರ್ಯ, ಶ್ರೀ ಧರ್ಮಶಾಸ್ತಾ ಮಿತ್ರಮಂಡಳಿಯ ಅಧ್ಯಕ್ಷ ಜನಾದರ್Àನ ನಾಯ್ಕ, ಮಾತೃಮಂಡಳಿಯ ಅಧ್ಯಕ್ಷೆ ಜಯಲಕ್ಷ್ಮೀ ಉಪಸ್ಥಿತರಿರುವರು. ಮಧ್ಯಾಹ್ನ ಶರಣಂ ವಿಳಿ, ಮಹಾಪೂಜೆ, ಅನ್ನದಾನ, ಸಂಜೆ ತಾಯಂಬಕ, ದೀಪಾರಾಧನೆ ವಿವಿಧ ಭಜನಾ ಸಂಘಗಳಿಂದ ಭಜನೆ. ಸಂಜೆ 7ರಿಂದ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಕುಣಿತ ಭಜನೆ, ಚೆಂಡೆಮೇಳದೊಂದಿಗೆ ಉಲ್ಪೆ ಮೆರವಣಿಗೆ ನಡೆಯಲಿದೆ. ನಂತರ ಶರಣಂ ವಿಳಿ, ಮಹಾಪೂಜೆ, ಅನ್ನದಾನ. ರಾತ್ರಿ ಶ್ರೀ ಧರ್ಮಶಾಸ್ತಾ ಮಾತೃಮಂಡಳಿ ನೀರ್ಚಾಲು ಇವರ ಪ್ರಾಯೋಜಕತ್ವದಲ್ಲಿ ಶ್ರೀ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ 43ನೇ ವಾರ್ಷಿಕೋತ್ಸವ: ಇಂದು ಮಾಣಿಲ ಶ್ರೀಗಳಿಂದ ಉಪಕಟ್ಟಡದ ಉದ್ಘಾಟನೆ, ರಾತ್ರಿ ಯಕ್ಷಗಾನ ಬಯಲಾಟ
0
ಡಿಸೆಂಬರ್ 27, 2022
Tags