HEALTH TIPS

ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ರಹಿತ ಚಾಲನೆಯಿಂದ 46,593 ಮಂದಿ ಮೃತ್ಯು: ವರದಿ

                 ವದೆಹಲಿ :ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2021ರಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಒಟ್ಟು 46,593 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದು, ಈ ಪೈಕಿ 32,877 ಮಂದಿ ಚಾಲಕರಾಗಿದ್ದರೆ, 13,716 ಮಂದಿ ಪ್ರಯಾಣಿಕರು ಸೇರಿದ್ದಾರೆ ಎಂದು ಹೇಳಲಾಗಿದೆ.

                    2021ರಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ಸೀಟ್ ಬೆಲ್ಟ್ ಧರಿಸದೆ ಒಟ್ಟು 16,397 ಮಂದಿ ಮೃತಪಟ್ಟಿದ್ದು, ಈ ಪೈಕಿ 8,438 ಮಂದಿ ಚಾಲಕರು ಹಾಗೂ 7,959 ಮಂದಿ ಪ್ರಯಾಣಿಕರು ಸೇರಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.

                   2021ರ ಅವಧಿಯಲ್ಲಿ ಒಟ್ಟು 4,12,432 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ಪೈಕಿ 1,28,825 ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ. ಈ ದುರ್ಘಟನೆಗಳಲ್ಲಿ 56,007 ಮಂದಿ ಮೃತಪಟ್ಟಿದ್ದು, 1,17,765 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

                    2020ರ ಅವಧಿಗೆ ಹೋಲಿಸಿದರೆ 2021ರಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಶೇ. 16.6ರಷ್ಟು ಏರಿಕೆಯಾಗಿದ್ದು, ಅಪಘಾತಗಳಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಪ್ರಮಾಣ ಕ್ರಮವಾಗಿ ಶೇ. 16.9 ಮತ್ತು ಶೇ. 10.4ರಷ್ಟು ಏರಿಕೆಯಾಗಿದೆ.

                 ರಸ್ತೆ ಅಪಘಾತಗಳಲ್ಲಿನ ಬಲಿಪಶುಗಳ ಶ್ರೇಯಾಂಕದಲ್ಲಿ ಉತ್ತರ ಪ್ರದೇಶ ಅಗ್ರ ಸ್ಥಾನ ಪಡೆದಿದ್ದು, ಶೇ. 15.2 ಮಂದಿ ಸಾವನ್ನಪ್ಪಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ತಮಿಳುನಾಡು (9.4%), ಮಹಾರಾಷ್ಟ್ರ (9.4%) ಹಾಗೂ ರಾಜಸ್ತಾನ (6.8%) ಇವೆ.

                  "ರಸ್ತೆ ಅಪಘಾತಗಳಲ್ಲಿ ಹೆಚ್ಚು ಬಲಿಯಾಗುತ್ತಿರುವವರು 18-45 ವಯೋಮಾನದ ಗುಂಪಿಗೆ ಸೇರಿದವರಾಗಿದ್ದಾರೆ. ರಸ್ತೆ ಅಪಘಾತಗಳಲ್ಲಿ ಸಂಭವಿಸಿರುವ ಮೃತ್ಯುಗಳ ಪೈಕಿ ಈ ವಯೋಮಾನದ ಗುಂಪಿನ ಶೇ. 67 ಮಂದಿ ಸೇರಿದ್ದಾರೆ" ಎಂದೂ ವರದಿಯಲ್ಲಿ ಹೇಳಲಾಗಿದೆ.


               2000 ಇಸವಿಯ ನಂತರ ರಸ್ತೆ ಅಪಘಾತಗಳ ತೀವ್ರತೆ ಏರುಗತಿಯಲ್ಲಿದ್ದು, ಸುಧಾರಿತ ತುರ್ತು ಅಪಘಾತ ಚಿಕಿತ್ಸಾ ಸೇವೆಗಳು ಮತ್ತು ಢಿಕ್ಕಿಯ ತೀವ್ರತೆ ತಗ್ಗಿಸುವ ಮಾನದಂಡಗಳನ್ನು ಹೊಂದಿರುವ ಸುಗಮ ಸಂಚಾರ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries