HEALTH TIPS

ಡಿ. 5ರಂದು ರಾತ್ರಿ 8 ಗಂಟೆಗೆ ನನ್ನ ತಾಯಿ ಸಾಯಲಿದ್ದಾರೆ! ಶಿಕ್ಷಕನ ಲೀವ್​ ಲೆಟರ್​ ನೋಡಿ ಮುಖ್ಯಶಿಕ್ಷಕರಿಗೆ ಶಾಕ್​

Top Post Ad

Click to join Samarasasudhi Official Whatsapp Group

Qries

 

               ಪಟನಾ: ಬಿಹಾರದ ಶಿಕ್ಷಕರು ರಜೆ ಕೋರಿ ಮುಖ್ಯಶಿಕ್ಷಕರಿಗೆ ಬರೆದಿರುವ ರಜೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ನನಗೆ ಹೊಟ್ಟೆ ನೋವು, ತಲೆ ನೋವು, ಜ್ವರ ಅಂತಾ ಕಾರಣ ನೀಡಿ ರಜೆ ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಇನ್ನು ಕೆಲವರು ನಮ್ಮ ಮನೆಯ ಸದಸ್ಯರೊಬ್ಬರು ತೀರಿ ಹೋಗಿದ್ದಾರೆ ಎಂದು ಸುಳ್ಳು ಹೇಳಿ ರಜೆ ಮಾಡುವವರೂ ಇದ್ದಾರೆ.

ಆದರೆ, ಬಿಹಾರದ ಈ ಶಿಕ್ಷಕ ರಜೆ ಪತ್ರದಲ್ಲಿ ನೀಡಿರುವ ಕಾರಣ ಎಲ್ಲರ ಹುಬ್ಬೇರಿಸಿದೆ.

                   ಅಂದಹಾಗೆ ಬಿಹಾರದ ಮುಂಗೇರ್, ಭಾಗಲ್ಪುರ್​ ಮತ್ತು ಬಂಕಾ ಜಿಲ್ಲೆಗಳಲ್ಲಿ ಶಿಕ್ಷಕರು ತಮ್ಮ ಕ್ಯಾಶುಯಲ್ ರಜೆಯ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಅದರ ಪ್ರಕಾರ ರಜೆ ಪಡೆಯುವ ಶಿಕ್ಷಕರು 3 ದಿನ ಮುಂಚಿತವಾಗಿಯೇ ಕ್ಯಾಶುಯಲ್ ರಜೆಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಅರ್ಜಿ ಸಲ್ಲಿಸದಿದ್ದರೆ ರಜೆಯನ್ನು ರದ್ದು ಮಾಡಲಾಗುವುದು ಎಂದಿದ್ದಾರೆ.

               ಇದೀಗ ರಜೆ ಪಡೆಯುವ ಶಿಕ್ಷಕರು ಅದಕ್ಕೆ ಸೂಕ್ತ ಕಾರಣಗಳನ್ನು ಸಹ ನೀಡಬೇಕಾಗಿದೆ. ಆದರೆ, ಶಿಕ್ಷಕರೊಬ್ಬರು ನೀಡಿರುವ ಕಾರಣ ಎಲ್ಲರನ್ನು ಆಘಾತಕ್ಕೆ ದೂಡಿದೆ. ಅಂಥದ್ದೇನಿದೆ ಆ ಪತ್ರದಲ್ಲಿ ಅಂತಾ ನೀವು ಯೋಚಿಸುತ್ತಿದ್ದೀರಾ? ಮುಂದೆ ಓದಿ.. ಡಿಸೆಂಬರ್​ 5ರಂದು ರಾತ್ರಿ 8 ಗಂಟೆಗೆ ನಮ್ಮ ತಾಯಿ ಮೃತಪಡಲಿದ್ದಾರೆ. ಹೀಗಾಗಿ ನನಗೆ 6 ಮತ್ತು 7ನೇ ತಾರೀಖು ತಾಯಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ರಜೆ ಬೇಕು ಎಂದು ಕೇಳಿದ್ದಾರೆ.

               ಸಾಯುವ ಮೊದಲೇ ಎಲ್ಲದಾರೂ ರಜೆ ಕೋರುವುದುಂಟ. ಇಂತಹ ಪ್ರಕರಣ ಬಹುಶಃ ಇದೇ ಮೊದಲು ಅನಿಸುತ್ತದೆ. ನಮ್ಮ ಮನೆಯ ಸದಸ್ಯರೊಬ್ಬರು ಸತ್ತಿದ್ದಾರೆ, ರಜೆ ಕೊಡಿ ಎಂದು ಕೇಳುವುದನ್ನು ನೋಡಿದ್ದೇವೆ. ಆದರೆ, ಸಾಯಲಿದ್ದಾರೆ ರಜೆ ಕೊಡಿ ಎಂದು ಕೇಳುವುದು ಅಸಹಜ ಎನಿಸದೇ ಇರದು. ಅಂದಹಾಗೆ ಈ ಪತ್ರ ಬರೆದಿರುವುದು ಶಿಕ್ಷಕ ಅಜಯ್​ ಕುಮಾರ್​ ಎಂಬುವರು.

             ಮತ್ತೊಬ್ಬ ಶಿಕ್ಷಕನ ರಜೆ ಪತ್ರ ಕೂಡ ವೈರಲ್​ ಆಗಿದೆ. ಅದರಲ್ಲಿ ಆತ ಡಿಸೆಂಬರ್ 4 ರಿಂದ ಡಿಸೆಂಬರ್ 5 ರವರೆಗೆ ಅನಾರೋಗ್ಯದಿಂದ ಬಳಲುತ್ತೇನೆ, ಇದರಿಂದಾಗಿ ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries