ನವದೆಹಲಿ :ಉದ್ಯೋಗಗಳು ಮತ್ತು ಪ್ರವೇಶಾತಿಗಳಲ್ಲಿ ಶೇ 50 ರಷ್ಟು ಮೀಸಲಾತಿ (reservations) ಮಿತಿಯನ್ನು ಸಡಿಲಗೊಳಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಕೇಂಧ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆ ಪ್ರತಿಮಾ ಭೌಮಿಕ್ (Union minister Pratima Bhoumik) ಬುಧವಾರ ಸಂಸತ್ತಿಗೆ ತಿಳಿಸಿದ್ದಾರೆ.
ಆರ್ಥಿಕ ದುರ್ಬಲ ವರ್ಗಗಳಿಗೆ ಶೇ 10 ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದರಿಂದ ಶೇ 50 ಮೀಸಲಾತಿ ಮಿತಿಯನ್ನು ಸಡಿಲಗೊಳಿಸುವ ಪ್ರಸ್ತಾವನೆ ಕೇಂದ್ರದ ಮುಂದಿದೆಯೇ ಎಂದು ಪಟ್ಟಳಿ ಮಕ್ಕಳ್ ಕಚ್ಚಿ ಪಕ್ಷದ ರಾಜ್ಯಸಭಾ ಸದಸ್ಯ ಅಂಬುಮನಿ ರಾಮದೋಸ್ಸ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಸಚಿವೆ ಉತ್ತರಿಸುತ್ತಿದ್ದರು.
ಇತರ ಹಿಂದುಳಿದ ವರ್ಗಗಳಿಗೆ ಈಗಿರುವ ಶೇ 27 ಮೀಸಲಾತಿಯನ್ನು ಹೆಚ್ಚಿಸುವ ಉದ್ದೇಶವಿದೆಯೇ ಎಂದೂ ಅವರು ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಈ ಕುರಿತಂತೆ ಸರ್ಕಾರ ಪರಿಶೀಲಿಸುತ್ತಿಲ್ಲ ಎಂದರು.