HEALTH TIPS

ಐದು ವರ್ಷಗಳಲ್ಲಿ ಸಂಸದರು, ಶಾಸಕರ ವಿರುದ್ಧ 56 ಪ್ರಕರಣಗಳು ದಾಖಲು: ಕೇಂದ್ರ ಸರಕಾರ

                  ವದೆಹಲಿ:ಸಿಬಿಐ 2017 ಮತ್ತು 2022ರ (ಅ.31ರವರೆಗೆ) ನಡುವೆ ಐದು ವರ್ಷಗಳಲ್ಲಿ ಶಾಸಕರು ಮತ್ತು ಸಂಸದರ ವಿರುದ್ಧ ಸುಮಾರು 56 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು,ಈ ಪೈಕಿ 22 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ ಎಂದು ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್(Jitendra Singh) ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.

                    ಅವರು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳ ರಾಜ್ಯವಾರು ಮಾಹಿತಿ ಕುರಿತು ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸುತ್ತಿದ್ದರು.

                  ಸಂಸದರು ಮತ್ತು ಶಾಸಕರ ವಿರುದ್ಧ 10 ಪ್ರಕರಣಗಳೊಂದಿಗೆ ಆಂಧ್ರಪ್ರದೇಶವು ಅಗ್ರಸ್ಥಾನದಲ್ಲಿದ್ದರೆ,ತಲಾ ಆರು ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಮತ್ತು ಕೇರಳ ನಂತರದ ಸ್ಥಾನದಲ್ಲಿವೆ. ಪ.ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಐದು,ತಮಿಳುನಾಡಿನಲ್ಲಿ ನಾಲ್ಕು,ಮಣಿಪುರ ದಿಲ್ಲಿ ಮತ್ತು ಬಿಹಾರದಲ್ಲಿ ತಲಾ ಮೂರು,ಜಮ್ಮು-ಕಾಶ್ಮೀರ ಮತ್ತು ಕರ್ನಾಟಕದಲ್ಲಿ ತಲಾ ಎರಡು ಹಾಗೂ ಹರ್ಯಾಣ,ಛತ್ತೀಸ್‌ಗಡ,ಮೇಘಾಲಯ ,ಉತ್ತರಾಖಂಡ,ಮಹಾರಾಷ್ಟ್ರ ಮತ್ತು ಲಕ್ಷದ್ವೀಪಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.

                   ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಮಾಧ್ಯಮಗಳನ್ನುದ್ದೇಶಿಸಿ ಮಾಡಿದ ಭಾಷಣದೊಂದಿಗೆ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಚಾಲನೆ ದೊರಕಿತು.

                    ಸಂಸತ್ತಿನ ಯುವಸದಸ್ಯರಿಗೆ ಮಾತನಾಡಲು ಹೆಚ್ಚಿನ ಅವಕಾಶ ನಿಡುವಂತೆ ಎಲ್ಲ ಸದನ ನಾಯಕರನ್ನು ಆಗ್ರಹಿಸಿದ ಅವರು,ತಾನು ಸಂಸದರೊಂದಿಗೆ ಮಾತನಾಡಿದಾಗೆಲ್ಲ ಕಲಾಪ ವ್ಯತ್ಯಯದಿಂದಾಗಿ ತಮಗೆ ಮಾತನಾಡಲು ಅವಕಾಶ ದೊರೆಯುತ್ತಿಲ್ಲ ಎನ್ನುವುದು ಅವರ ಸಾಮಾನ್ಯ ದೂರು ಆಗಿದೆ ಎಂದರು. ಚಳಿಗಾಲದ ಅಧಿವೇಶನವು ನಿರ್ಣಾಯಕವಾಗಿದ್ದು,ಭಾರತವು ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸಂದರ್ಭದಲ್ಲಿ ಸಂಸತ್ತು ಸಮಾವೇಶಗೊಳ್ಳುತ್ತಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries