ಕಾಸರಗೋಡು: ಕೇರಳ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬಹುಭಾಷಾ ಸಮ್ಮೇಳನವು ಜನವರಿ 6 ಮತ್ತು 7 ರಂದು (ಶುಕ್ರವಾರ ಮತ್ತು ಶನಿವಾರ) ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದಲ್ಲಿ ನಡೆಯಲಿದೆ. ಉಪನ್ಯಾಸ, ಚರ್ಚಾಸ್ಪರ್ಧೆ, ನಾಟಕ, ಭಾμÁ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಕವಿಗೋಷ್ಠಿಗಳು ಏಳು ಭಾಷೆಗಳಲ್ಲಿ ನಡೆಯಲಿದೆ.
‘ಗಿಳಿವಿಂಡು’ ಎಂಬ ನಾಮಧೇಯದಲ್ಲಿ ಸಮ್ಮೇಳನ ನಡೆಯಲಿದೆ. ಕೇರಳ ಹಾಗೂ ಕರ್ನಾಟಕದ ಲೇಖಕರು ಮತ್ತು ಭಾಷಾಶಾಸ್ತ್ರಜ್ಞರು ಅತಿಥಿಗಳಾಗಿ ಆಗಮಿಸುವರು. ಖ್ಯಾತ ಕವಿ ಹಾಗೂ ವಿಮರ್ಶಕ ಸಚ್ಚಿದಾನಂದನ್ ಉದ್ಘಾಟಿಸುವರು. ಡಾ. ಕೆ. ಚಿನ್ನಪ್ಪ ಗೌಡ, ಡಾ.ಇ.ವಿ.ರಾಮಕೃಷ್ಣನ್, ಸಿ.ವಿ.ಬಾಲಕೃಷ್ಣನ್, ಅಶೋಕನ್ ಚರುವಿಲ್, ಕೆ.ಪಿ.ರಾಮನುಣ್ಣಿ, ಪಿ.ಎನ್.ಗೋಪಿ ಕೃಷ್ಣನ್, ಕರಿವೆಳ್ಳೂರು ಮುರಳಿ, ಕೆ.ವಿ.ಕುಮಾರನ್, ಕೆ.ವಿ.ಕುಂಞÂ ರಾಮನ್, ಪಿ.ವಿ.ಕೆ.ಪನಯಾಲ್, ಡಾ.ಸಿ.ಬಾಲನ್, ಡಾ.ಎ.ಎಂ.ಶ್ರೀಧರನ್, ಪಯ್ಯನ್ನೂರು ಕುಂಞÂ ರಾಮನ್, ಮಿನಿ ಪ್ರಸಾದ್, ರಾವುಣ್ಣಿ, ರಾಜಶ್ರೀ ರೈ, ಡಾ.ರಮಾನಂದ ಬನಾರಿ, ಪಿ.ಅಪ್ಪುಕುಟ್ಟನ್, ಡಾ.ರಾಧಾಕೃಷ್ಣ ಬೆಳ್ಳೂರು ಮುಂತಾದವರು ವಿವಿಧ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.
ಕೇರಳ ಸಂಗೀತ ನಾಟಕ ಅಕಾಡೆಮಿ, ಕೇರಳ ಜಾನಪದ ಅಕಾಡೆಮಿ, ಕೇರಳ ಲಲಿತ ಕಲಾ ಅಕಾಡೆಮಿ, ಕೇರಳ ತುಳು ಅಕಾಡೆಮಿ ಮತ್ತು ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದ ಸಹಯೋಗದಲ್ಲಿ ಭಾμÁ ಸಮ್ಮೇಳನವನ್ನು ಆಯೋಜಿಸಲಾಗಿದೆ. ಭಾμÁ ಸಮ್ಮೇಳನದ ಅಂಗವಾಗಿ ಜನವರಿ 5 ರಂದು ಸಂಜೆ 4 ಗಂಟೆಗೆ ಕಾಸರಗೋಡು ಪಿಲಿಕುಂಜೆ ನಗರಸಭಾ ಸಮ್ಮೇಳನ ಸಭಾಂಗಣದಲ್ಲಿ ಭಾμÁ ಸಮುದಾಯದ ಉಳಿವು ಮತ್ತು ಕಾಸರಗೋಡಿನ ಭಾμÁ ಸ್ವರೂಪ ವಿಷಯಗಳ ಕುರಿತು ಉಪನ್ಯಾಸಗಳು ನಡೆಯಲಿವೆ. ಡಾ.ಸುನಿಲ್ ಪಿ. ಇಳಯದಂ, ಪ್ರೊ.ಸಿ.ಪಿ.ಅಬೂಬಕರ್, ಡಾ.ರತ್ನಾಕರ ಮಲ್ಲಮೂಲೆ ಮಾತನಾಡುವರು. ಶಾಸಕ ಎ.ಕೆ.ಎಂ.ಅಶ್ರಫ್, ತುಳು ಅಕಾಡೆಮಿ ಅಧ್ಯಕ್ಷ, ಕೆ.ಆರ್.ಜಯಾನಂದ ಕಾರ್ಯಾಧ್ಯಕ್ಷ ಹಾಗೂ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಕೆ.ಮನೋಹರನ್ ಪ್ರಧಾನ ಸಂಚಾಲಕರಾಗಿ ಭಾμÁ ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಜನವರಿ 6 ಮತ್ತು 7 ರಂದು ಸಾಹಿತ್ಯ ಅಕಾಡೆಮಿ ಬಹುಭಾಷಾ ಸಮ್ಮೇಳನ: 5 ರಂದು ಕಾಸರಗೋಡಲ್ಲಿ ಉದ್ಘಾಟನೆ
0
ಡಿಸೆಂಬರ್ 18, 2022
Tags