HEALTH TIPS

ತಿರುಪತಿ ವೆಂಕಟೇಶ್ವರ ದೇಗುಲದ ಗರ್ಭಗುಡಿ 6-8 ತಿಂಗಳುಗಳ ಕಾಲ ಬಂದ್?

 

     ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023 ರಲ್ಲಿ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ.

        ತಿರುಮಲದ ಮುಖ್ಯ ಗರ್ಭಗುಡಿ ಮೇಲೆ ಇರುವ ವಿಮಾನ ಆಕೃತಿಯ(ಮೂರು ಅಂತಸ್ತು) ಗೋಪುರ ಆನಂದ ನಿಲಯಕ್ಕೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು ಬದಲಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಟಿ) ನಿರ್ಧರಿಸಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

         ನೂತನ ಚಿನ್ನದ ಲೇಪನ ಕಾರ್ಯ ಪೂರ್ಣಗೊಳ್ಳುವವರೆಗೆ ದೇವಸ್ಥಾನದ ಸಮೀಪ ತಾತ್ಕಾಲಿಕವಾಗಿ ವೆಂಕಟೇಶ್ವರ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರುವರಿಯಲ್ಲಿ ಕೆಲಸ ಆರಂಭಗೊಳ್ಳಲಿದ್ದು, ಈ ಚಿನ್ನದ ಲೇಪನದ ಕಾರ್ಯ ಪೂರ್ಣಗೊಳ್ಳಲು ಆರು ತಿಂಗಳು ಬೇಕಾಗಬಹುದು ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್ ತಿಳಿಸಿದ್ದಾರೆ.

            ಹಾಗಾದರೆ, ಈ ಸಮಯದಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದು ಹೇಗೆ? ಎಂಬ ಪ್ರಶ್ನೆ ಸಹಜ. ಇದಕ್ಕಾಗಿ, ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಲು ಯೋಜಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

               ಡಿಸೆಂಬರ್ ಮೊದಲ ವಾರದಲ್ಲಿ ಟ್ರಸ್ಟ್‌ನ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. "ಆಗಮ ಶಾಸ್ತ್ರ" ಸಲಹೆಗಾರರು (ಆಗಮ ಶಾಸ್ತ್ರವು ದೇವಾಲಯದ ನಿರ್ಮಾಣಗಳು ಮತ್ತು ಆಚರಣೆಗಳ ನಡವಳಿಕೆಯ ಬಗ್ಗೆ ವ್ಯವಹರಿಸುವ ಪುರಾತನ ಗ್ರಂಥವಾಗಿದೆ), ಪುರೋಹಿತರು, ಸಿವಿಲ್ ಎಂಜಿನಿಯರ್‌ಗಳು ಮತ್ತು ಇತರ ತಜ್ಞರೊಂದಿಗೆ ಸುದೀರ್ಘ ಚರ್ಚೆ ಮತ್ತು ಸಮಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆʼʼ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

         ಮೂಲ ದೇವಾಲಯವನ್ನು ಪುನಃಸ್ಥಾಪಿಸುವವರೆಗೆ, ಎಲ್ಲಾ ದೈನಂದಿನ ಆಚರಣೆಗಳನ್ನು ತಾತ್ಕಾಲಿಕ ದೇವಾಲಯದಲ್ಲಿ ಮಾಡಲಾಗುವುದು ಮತ್ತು ಭಕ್ತರಿಗೆ ದೇವರ ದರ್ಶನವನ್ನು ಇಲ್ಲೇ ಒದಗಿಸಲಾಗುವುದು" ಎಂದು ದೀಕ್ಷಿತುಲು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮೂಲ ದೇವಾಲಯದ ಗರ್ಭಗುಡಿಯೊಳಗೆ ಕೆಲವು ಕಡ್ಡಾಯ ಆಚರಣೆಗಳನ್ನು ನಡೆಸುವುದನ್ನು ಮುಂದುವರಿಸುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries