ತಿರುವನಂತಪುರ: ಆರೋಗ್ಯ ಕ್ಷೇತ್ರದಲ್ಲಿ ಕಿಮ್ಸ್ ಹೆಲ್ತ್ ಮತ್ತೊಮ್ಮೆ ಮಹತ್ವದ ಸಾಧನೆ ಮಾಡಿದೆ. ಗರ್ಭಾಶಯದಲ್ಲಿದ್ದ ಭಾರೀ ಗಡ್ಡೆಯನ್ನು ತೆಗೆದು ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಿದೆ.
ಕೊಲ್ಲಂ ಮೂಲದ ಮಹಿಳೆಯ ಗರ್ಭಾಶಯದಿಂದ 6.5 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆಯಲಾಗಿದೆ.
ಟ್ಯೂಮರ್ ಎನ್ನುವುದು ದೇಹದ ಯಾವುದೇ ಭಾಗದಲ್ಲಿ ನಿಯಂತ್ರಣವಿಲ್ಲದೆ ಬೆಳೆಯುವ ಕೋಶವಾಗಿದೆ. ಕಳೆದ ಒಂದು ವರ್ಷದಿಂದ ಗಡ್ಡೆಯೊಂದಿಗೇ ಜೀವನ ನಡೆಸುತ್ತಿದ್ದ ಯುವತಿ ಹೊಟ್ಟೆಯಲ್ಲಿ ತೀವ್ರ ಊತ ಹಾಗೂ ವಿಪರೀತ ನೋವಿನಿಂದ ಕಿಮ್ ಹೆಲ್ತ್ ಗೆ ಬಂದಿದ್ದಳು.
ಒಪಿಯಲ್ಲಿ ಪರೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲೇ ಗರ್ಭಕೋಶದಿಂದ ಗಡ್ಡೆ ಬೆಳೆದು ಅಸಹನೀಯ ನೋವಿಗೆ ಕಾರಣವಾಗಿತ್ತು. ನಂತರ ಎಂಆರ್ ಐ ಸ್ಕ್ಯಾನ್ ಇತ್ಯಾದಿ ತಜ್ಞರ ಪರೀಕ್ಷೆಗಳನ್ನು ಮಾಡಿ ಗರ್ಭಕೋಶ ತೆಗೆಯಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರು. ಒಂಬತ್ತು ತಿಂಗಳ ಗರ್ಭಾಶಯದ ಗಡ್ಡೆಯನ್ನು ಮೂರು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ತೆಗೆದುಹಾಕಲಾಯಿತು.
ಗರ್ಭಾಶಯದಲ್ಲಿ ಈ ಗಾತ್ರದ ಗಡ್ಡೆ ಉಂಟಾಗುವುದು ಬಹಳ ಅಪರೂಪ. ಈ ಗೆಡ್ಡೆಗಳು ಮೂತ್ರಪಿಂಡ ಮತ್ತು ಕೊಲೊನ್ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಅದೇ ರೀತಿ ಈ ಗಾತ್ರದ ಗಡ್ಡೆಯನ್ನು ಇತರ ಅಂಗಗಳಿಗೆ ಬಾಧಿಸದಂತೆ ತೆಗೆಯುವುದು ದೊಡ್ಡ ಸವಾಲಾಗಿತ್ತು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಮಾಲೋಚಕ ಡಾ. ಸಜಿತ್ ಮೋಹನ್ ಆರ್ ಹೇಳಿದರು.
ಒಂದು ವರ್ಷದ ಹಿಂದೆ, ಹೊಟ್ಟೆ ನೋವು ಮತ್ತು ಊತದಿಂದ ಬಳಲುತ್ತಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಭಯವು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿತು. ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಹಾಗೂ ಹಿರಿಯ ಸಲಹೆಗಾರರಾದ ಡಾ.ರಫೀಕ್. ಪಿ, ಸಲಹೆಗಾರ ಡಾ. ಸಜಿತ್ ಮೋಹನ್ ಆರ್ ಮತ್ತು ಅರಿವಳಿಕೆ ವಿಭಾಗದ ಸಲಹೆಗಾರ ಡಾ.ವಲ್ಲಿ ಅವರನ್ನೊಳಗೊಂಡ ವೈದ್ಯಕೀಯ ತಂಡವು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿÀಸಿತ್ತು. ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ, ಮಹಿಳೆ ಪರಿಪೂರ್ಣ ಆರೋಗ್ಯದಿಂದ ಆಸ್ಪತ್ರೆಯಿಂದ ಮನೆಗೆ ತೆರಳಿದರು.
ಗರ್ಭಾಶಯದಲ್ಲಿ 6.5 ಕೆಜಿ ತೂಕದ ಗೆಡ್ಡೆ: ಯಶಸ್ವಿ ಶಸ್ತ್ರಕ್ರಿಯೆ ನಿರ್ವಹಿಸಿದ ಕಿಮ್ಸ್
0
December 30, 2022
Tags