HEALTH TIPS

ದಾಖಲೆ, ವಕೀಲರ ಕೊರತೆಯಿಂದ 77 ಲಕ್ಷಕ್ಕೂ ಅಧಿಕ ವ್ಯಾಜ್ಯಗಳ ವಿಚಾರಣೆ ಬಾಕಿ: ಸಿಜೆಐ

 

                ಅಮರಾವತಿ: ಕೋರ್ಟ್‌ಗಳಲ್ಲಿ ವಾದ ಮಂಡಿಸಲು ವಕೀಲರು ಲಭ್ಯವಿಲ್ಲದೆ ಇರುವುದರಿಂದ 63 ಲಕ್ಷಕ್ಕೂ ಅಧಿಕ ಮತ್ತು ಕೆಲವು ದಾಖಲೆಗಳ ಕೊರತೆಯಿಂದಾಗಿ 14 ಲಕ್ಷಕ್ಕೂ ಅಧಿಕ ವ್ಯಾಜ್ಯಗಳ ವಿಚಾರಣೆಯು ದೇಶದಲ್ಲಿ ನನೆಗುದಿಗೆ ಬಿದ್ದಿವೆ.

                   ರಾಷ್ಟ್ರೀಯ ನ್ಯಾಯಾಂಗ ಅಂಕಿ ಅಂಶ ಕೋಷ್ಠಕದ (ಎನ್‌ಜೆಡಿಜಿ) ಮಾಹಿತಿಗಳನ್ನು ಆಧರಿಸಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಶುಕ್ರವಾರ ಈ ಮಾತು ಹೇಳಿದರು.

                  ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಅವರು, ನ್ಯಾಯಾಂಗದಲ್ಲಿ ಜಿಲ್ಲಾ ಕೋರ್ಟ್‌ಗಳು 'ಕೆಳಹಂತದ ಕೋರ್ಟ್' ಎಂಬ ಮನಸ್ಥಿತಿಯಿಂದ ಜನತೆ ಮೊದಲು ಹೊರಬರಬೇಕು. ಜಿಲ್ಲಾ ಕೋರ್ಟ್‌ಗಳು ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು. ಹಲವರಿಗೆ ಮೊದಲು ಮುಖಾಮುಖಿಯಾಗುವ ನ್ಯಾಯ ವ್ಯವಸ್ಥೆ ಎಂಬುದನ್ನು ಮನಗಾಣಬೇಕು ಎಂದರು.

                    'ಜಾಮೀನು ಹೊರತು ಬಂಧನವಲ್ಲ' ಎಂಬುದು ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ನಿಯಮ. ಆದರೆ, ಈ ನಿಯಮಕ್ಕೆ ವಿರೋಧಾಭಾಸ ಎಂಬಂತೆ ಇಂದಿಗೂ ಅನೇಕ ಮಂದಿ ವಿಚಾರಾಣಾಧೀನ ಕೈದಿಗಳು ಜೈಲುಗಳಲ್ಲಿದ್ದಾರೆ' ಎಂದು ವಿಷಾದಿಸಿದರು.

               ಜಿಲ್ಲಾ ಕೋರ್ಟ್‌ಗಳಲ್ಲಿ ಸಿಆರ್‌ಪಿಸಿ ಸೆಕ್ಷನ್‌ 438 (ಜಾಮೀನು) ಅಥವಾ ಸೆಕ್ಷನ್ 439 (ಜಾಮೀನು ರದ್ದತಿ) ಎಂಬುದೇ ಅರ್ಥವಿಲ್ಲದ, ಯಾಂತ್ರಿಕವಾದ ಪ್ರಕ್ರಿಯೆ ಆಗಬಾರದು. ಕಡುಬಡವರ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಜಿಲ್ಲಾ ಕೋರ್ಟ್‌ಗಳ ಹಂತದಲ್ಲಿಯೇ ಪರಿಹಾರೋಪಾಯಗಳನ್ನು ಒದಗಿಸಲು ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries