ಕೋಝಿಕ್ಕೋಡ್: 8ನೇ ತರಗತಿಯ ಮಲಯಾಳಂ ಭಾಗ 2 ರ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಜ್ಯೋತಿಷ್ಯ ಮತ್ತು ಜ್ಯೋತಿಷಿಗಳನ್ನು ವಂಚಕರೆಂಬ ಬಿಂಬಿಸುವ ಪ್ರಶ್ನೆ ಕೇಳಿರುವುದು ವಿವಾದಕ್ಕೆಡೆಯಾಗಿದೆ.
ಮಂಗಳವಾರ ನಡೆದ ಮಲಯಾಳಂ 2ನೇ ಪತ್ರಿಕೆಯ ಪ್ರಶ್ನೆ ಪತ್ರಿಕೆಯಲ್ಲಿ ಇಂತಹ ಕೀಳುಮಟ್ಟದ ಪ್ರಶ್ನೆ ಉಲ್ಲೇಖಿಸಲ್ಪಟ್ಟಿದೆ. ಈ ತಾರತಮ್ಯದ ಪ್ರಶ್ನೆಯು ಕಾನೂನುಬಾಹಿರ ಮತ್ತು ಸಮಾಜವಿರೋಧಿ ಎಂದು ವಿವಾದ ಹುಟ್ಟಿಕೊಂಡಿದೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಲು ಯತ್ನಿಸಿವೆ ಎಂದು ವಿವರಿಸಲಾಗಿದೆ.
ಈ ಕ್ರಮದಿಂದ ಜ್ಯೋತಿಷ್ಯ, ಖಗೋಳ ಶಾಸ್ತ್ರದಲ್ಲಿ ದುಡಿಯುತ್ತಿರುವವರನ್ನು ಹಾಗೂ ಅವರ ಕುಟುಂಬದವರನ್ನು ಸಮಾಜದ ಮುಂದೆ ಕೀಳಾಗಿ ಕಾಣುವಂತೆ ಮಾಡಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಕುಂಚನ್ ನಂಬಿಯಾರ್ ಅವರ ಧ್ರುವಚರಿತಂ ತುಳ್ಳಲ್‍ನ ‘ಕಲನ್ ನಿದ್ದ ಕಾಲಂ’ ಎಂಬ ಶೀರ್ಷಿಕೆಯ ಭಾಗವನ್ನು 8 ನೇ ತರಗತಿಯಲ್ಲಿ ಅಧ್ಯಯನ ಮಾಡಬೇಕಾಗಿದೆ. ಅದರಲ್ಲಿ ‘ಜ್ಯೋತಿಷ್ಯ ಶಾಸ್ತ್ರ ಓದಿದ ಬಹುತೇಕರಿಗೆ ಅರ್ಧ ರಾಜ್ಯ ಸಿಗಬೇಕಲ್ಲ, ಜಾತಕ ನೋಡುವವರ ಭವಿಷ್ಯ ಕೇಳಿದರೆ ಹಲವು ಅಪಸವ್ಯಗಳಿವೆ’ ಎಂಬ ಭಾಗವನ್ನು ಆಧರಿಸಿದ ಪ್ರಶ್ನೆಯಲ್ಲಿ, ‘‘ನೋಡಬಹುದಲ್ಲ? ಇಂದಿಗೂ ಹೀಗೆ ವಂಚನೆಗೆ ಒಳಗಾಗಿರುವ ಜನರು? ಎಂಬ ಸಾಲುಗಳು ಮತ್ತು ಪ್ರಸ್ತುತ ಘಟನೆಗಳ ಕಲ್ಪನೆಯನ್ನು ಪರಿಗಣಿಸಿ 'ಮೂಢನಂಬಿಕೆ ಮತ್ತು ಹೊಸ ಪೀಳಿಗೆ' ಕುರಿತು ಉಪನ್ಯಾಸವನ್ನು ತಯಾರಿಸಲು ಹೇಳಲಾಗಿದೆ.
ಪ್ರಶ್ನೆಯು ಮಕ್ಕಳನ್ನು ತಮ್ಮ ಆಯ್ಕೆಯಂತೆ ಉತ್ತರ ಬರೆಯುವ ಅವಕಾಶವನ್ನು ಕಸಿದುಕೊಂಡು ಜ್ಯೋತಿಷ್ಯವನ್ನು ಅವಹೇಳನ ಮಾಡುವ ಉತ್ತರವನ್ನು ಬರೆಯುವಂತೆ ಒತ್ತಾಯಿಸುತ್ತಿದೆ. ಇದು ಪರೀಕ್ಷೆಯ ಮಾನದಂಡ ಅಥವಾ ಉದ್ದೇಶಕ್ಕೆ ಅನುಗುಣವಾಗಿಲ್ಲ. 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗೊಂದಲಮಯ ಪ್ರಶ್ನೆಗಳನ್ನು ಸಿದ್ಧಪಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಮೇಲೂ ರಾಜಕೀಯ ಅಭಿಪ್ರಾಯಗಳನ್ನು ಹೇರುತ್ತಿದೆ ಎಂದು ಬೆಟ್ಟು ಮಾಡಿ ಪ್ರತಿಭಟನೆಗಳು ಆರಂಭವಾಗಿವೆ.
ಜ್ಯೋತಿಷ್ಯವನ್ನು ಮೂಢನಂಬಿಕೆ ಎಂದು ಬಿಂಬಿಸಿ ಉತ್ತರ ಬರೆಯಲು ಪ್ರೇರೇಪಿಸುವ ಪ್ರಶ್ನಾವಳಿ: 8ನೇ ತರಗತಿ ಮಲಯಾಳಂ 2ನೇ ಪತ್ರಿಕೆಯ ಪ್ರಶ್ನೆ ವಿವಾದದಲ್ಲಿ
0
ಡಿಸೆಂಬರ್ 22, 2022