ಇಸ್ಲಾಮಾಬಾದ್: ಪಾಕಿಸ್ತಾನ ಜನತೆಗೆ ಅಧಿಕ ಹಣದುಬ್ಬರ ಹಾಗೂ ಬೆಲೆ ಏರಿಕೆ ಬಿಸಿಯ ಮಧ್ಯೆ ಈಗ ಕರೆಂಟ್ ಶಾಕ್ ನೀಡಲಾಗಿದ್ದು, ವಿದ್ಯುತ್ ಬಿಕ್ಕಟ್ಟಿನಿಂದಾಗಿ ದೇಶಾದ್ಯಂತ ಮಾರುಕಟ್ಟೆಗಳು ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 8 ಗಂಟೆಯೊಳಗೆ ಬಂದ್ ಮಾಡಬೇಕಾಗಿದೆ ಮತ್ತು ಮದುವೆ ಹಾಲ್‌ಗಳನ್ನು ರಾತ್ರಿ 10 ಗಂಟೆ ಬಂದ್ ಮಾಡಬೇಕಾದ ಸ್ಥಿತಿ ಎದುರಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ಮತ್ತು ಜೂನ್‌ನಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಪಾಕಿಸ್ತಾನ ತೀವ್ರ ಇಂಧನ ಸಮಸ್ಯೆ ಎದುರಿಸುತ್ತಿದೆ.
ವಿದ್ಯುತ್ ಕೊರತೆಯಿಂದಾಗಿ ದೇಶಾದ್ಯಂತ ಮಾರುಕಟ್ಟೆಗಳು, ರೆಸ್ಟೋರೆಂಟ್‌ಗಳನ್ನು ರಾತ್ರಿ 8 ಗಂಟೆಯೊಳಗೆ ಮತ್ತು ಮದುವೆ ಹಾಲ್‌ಗಳನ್ನು ರಾತ್ರಿ 10 ಗಂಟೆ ಬಂದ್ ಮಾಡುವ ಚಿಂತನೆ ಇದೆ. ಇದನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸುವುದಕ್ಕಾಗಿ ಫೆಡರಲ್ ಸರ್ಕಾರ ಪ್ರಾಂತ್ಯಗಳನ್ನು ಸಂಪರ್ಕಿಸುತ್ತದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಹೇಳಿದ್ದಾರೆ.
ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಾಕ್ ಸಚಿವರು, ಗುರುವಾರದೊಳಗೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಈ ನಿರ್ಬಂಧದ ಅಡಿಯಲ್ಲಿ, ಮದುವೆ ಹಾಲ್‌ಗಳ ಸಮಯವನ್ನು ರಾತ್ರಿ 10 ಗಂಟೆಗೆ ಸೀಮಿತಗೊಳಿಸಲಾಗುವುದು ಮತ್ತು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಹಾಗೂ ಮಾರುಕಟ್ಟೆಗಳನ್ನು ರಾತ್ರಿ 8 ಗಂಟೆಗೆ ಬಂದ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.