ಬದಿಯಡ್ಕ: ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಬಡಕುಟುಂಬವೊಂದು ಕಣ್ಣೀರು ಸುರಿಸುವಂತಾಗಿದೆ. ತಂದೆ ತಾಯಿಯವರ ಬಾಳಿಗೆ ಬೆಳಕಾಗಬೇಕಿದ್ದ ಎರಡು ಕಣ್ಣುಗಳಿಂತಿರುವ ಮಕ್ಕಳಿಗೆ ಕಿಡ್ನಿಸಂಬಂಧಿ ಖಾಯಿಲೆ ಬಂದಿರುವುದು ಕುಟುಂಬಕ್ಕೆ ಆಘಾತವನ್ನು ತಂದಿದೆ.
ಬದಿಯಡ್ಕ ಗ್ರಾಮಪಂಚಾಯಿತಿ ವ್ಯಾಪ್ತಿಯ ವಳಕುಂಜದಲ್ಲಿ ವಾಸಿಸುವ ಜನಾರ್ದನ - ರೇವತಿ ದಂಪತಿಗಳ ಮಕ್ಕಳಾದ ಶ್ರೀಜ (28), ಮಂಜುನಾಥ (20) ಎಂಬವರಿಗೆ ಕಿಡ್ನಿ ಸಂಬಂಧ ಖಾಯಿಲೆ ಇರುವುದಾಗಿ ತಜ್ಞ ವೈದ್ಯರು ತಿಳಿಸಿರುತ್ತಾರೆ. ಶಸ್ತ್ರಕ್ರಿಯೆಯ ಮೂಲಕ ಕಿಡ್ನಿಯನ್ನು ಬದಲಾಯಿಸಬೇಕೆಂದೂ ಸೂಚಿಸಿರುತ್ತಾರೆ. ಇದಕ್ಕಾಗಿ ಸುಮಾರು 80 ಲಕ್ಷರೂಪಾಯಿ ವೆಚ್ಚ ತಗುಲಲಿದೆ ಎಂದೂ ಅಂದಾಜಿಸಲಾಗಿದೆ. ಈ ಬಡಕುಟುಂಬದ ಅಕ್ಕ, ತಮ್ಮಂದಿರಿಗೆ ಇದೀಗ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಲಾಗುತ್ತಿದೆ. ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬವು ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಕಷ್ಟಸಾಧ್ಯವಾಗಿದೆ. ತಂದೆ ತಾಯಿಯರ, ಬಂಧುಗಳ ಕಣ್ಣೀರ ರೋಧನ ಮುಗಿಲುಮುಟ್ಟಿದೆ.
ಮಂಜು-ಶ್ರೀಜ ಮೆಡಿಕಲ್ ಟ್ರೀಟ್‍ಮೆಂಟ್ ಸಮಿತಿ :
ಬಡಕುಟುಂಬದ ನೆರವಿಗೆ ಜಾತಿ ಮತ ರಾಜಕೀಯ ಮರೆತು ನಾಡಿನ ಜನರು ಒಂದಾಗಿದ್ದು, ಇದೀಗ ಮಂಜು-ಶ್ರೀಜ ಮೆಡಿಕಲ್ ಟ್ರೀಟ್‍ಮೆಂಟ್ ಸಮಿತಿಯನ್ನು ರೂಪಿಸಿದ್ದಾರೆ. ದಾನಿಗಳಿಂದ ಆರ್ಥಿಕ ಸಹಕಾರವನ್ನು ನೀರೀಕ್ಷಿಸಿ ಕೇರಳ ಗ್ರಾಮೀಣ ಬೇಂಕ್ ಬದಿಯಡ್ಕ ಶಾಖೆಯಲ್ಲಿ ಖಾತೆಯನ್ನು ತೆರೆಯಲಾಗಿದೆ.
ಹೆಸರು: ಮಂಜು-ಶ್ರೀಜ ಮೆಡಿಕಲ್ ಟ್ರೀಟ್ ಮೆಂಟ್ ಕಮಿಟಿ ಖಾತೆ ಸಂ: 40617101111871, ಐ.ಎಫ್.ಎಸ್.ಸಿ ಕೋಡ್: ಕೆ.ಎಲ್.ಜಿ.ಬಿ.0040617,
ಗೂಗಲ್ ಪೇ ನಂಬ್ರ: 8891243838 ಸಂಖ್ಯೆಗೆ ಧನಸಹಾಯವನ್ನು ನೀಡಲು ಕೋರಲಾಗಿದೆ. ಚೇರ್ ಮ್ಯಾನ್ ಆಗಿ ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಸಂಚಾಲಕರಾಗಿ ಸಾಮಾಜಿಕ ಕಾರ್ಯಕರ್ತ ಗಂಗಾಧರ ಪಳ್ಳತ್ತಡ್ಕ, ಕೋಶಾಧಿಕಾರಿಯಾಗಿ ಹಮೀದ್ ಪಳ್ಳತ್ತಡ್ಕ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರ ತಂಡವೇ ಬಡಕುಟುಂಬದ ನೆರವಿಗೆ ನಿಂತಿದೆ.
ಮಂಜು-ಶ್ರೀಜ ಮೆಡಿಕಲ್ ಟ್ರೀಟ್ಮೆಂಟ್ ಸಮಿತಿಯ ವಿನಂತಿ ಪತ್ರವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ ನೀಡಿ ಆಶೀರ್ವಾದವನ್ನು ಪಡೆಯಲಾಯಿತು. ಸಮಿತಿಯ ಪದಾಧಿಕಾರಿಗಳು, ಸಾಮಾಜಿಕ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.