HEALTH TIPS

85 ವರ್ಷದಿಂದ ಮನೆಯಲ್ಲಿ ಆತ್ಮಗಳು ನೆಲೆಸಿವೆ ಎಂದು ನಂಬಿಸಿ ಐವರು ಮಂತ್ರವಾದಿಗಳಿಂದ ಮಹಾವಂಚನೆ!

 

         ಅಹಮದಾಬಾದ್​: ತಾಂತ್ರಿಕವಾಗಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಜನರು ಇಂದಿಗೂ ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ಮೋಸ ಹೋಗುತ್ತಿರುವ ಸಾಕಷ್ಟು ಉದಾಹರಣೆಗಳು ಆಗಾಗ ನಮ್ಮ ಎದುರಿಗೆ ಬರುತ್ತಿರುತ್ತವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

              ಐವರು ಮಂತ್ರವಾದಿಗಳು ಗುಜರಾತಿನ ಬಸನಕಾಂತ ಮೂಲದ ಕುಟುಂಬವೊಂದಕ್ಕೆ ವಂಚನೆ ಮಾಡಿ ಬರೋಬ್ಬರಿ 35 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ. ಈ ಪ್ರಕರಣ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮೂಢನಂಬಿಕೆಯು ವ್ಯಕ್ತಿಯ ದುರ್ಬಲವಾಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

             ಗುಜರಾತಿನ ಧನೇರಾ ತಾಲೂಕಿನ ಗೆಲಾ ಗ್ರಾಮದ ಕುಟುಂಬಕ್ಕೆ ಮಂತ್ರವಾದಿಗಳು ಮೋಸ ಮಾಡಿದ್ದಾರೆ. ಮಂತ್ರವಾದಿಗಳು ಕುಟುಂಬವನ್ನು ಸಂಪರ್ಕಿಸಿದಾಗ ತಮ್ಮ ಮನೆಯಲ್ಲಿ ಸಮಸ್ಯೆಯಿರುವುದಾಗಿ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮಂತ್ರವಾದಿಗಳು ಕಳೆದ 82 ವರ್ಷಗಳಿಂದ ನಿಮ್ಮ ಮನೆಯಲ್ಲಿ ಆತ್ಮಗಳು ನೆಲೆಸಿವೆ ಎಂದು ಹೇಳಿದ್ದಾರೆ. ಇದರಿಂದ ಬೆದರಿದ ಕುಟುಂಬ ಸಮಸ್ಯೆ ಪರಿಹಾರಕ್ಕೆ ಏನು ಮಾಡಬೇಕೆಂದು ಕೇಳಿದೆ. ಮನೆಯಲ್ಲಿರುವ ಆತ್ಮಗಳನ್ನು ಹೊರ ಓಡಿಸಲು ಪೂಜೆ ಮಾಡಿಸಬೇಕೆಂದು ಹೇಳಿದ ಮಂತ್ರವಾದಿಗಳು ತಾವೇ ಪೂಜೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ, ಪೂಜೆಗೆ ಒಂದು ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದಿದ್ದಾರೆ. ಮಂತ್ರವಾದಿಗಳ ಮಾತನ್ನು ನಂಬಿದ ಕುಟುಂಬಸ್ಥರು ಭಾರಿ ಮೊತ್ತವನ್ನು ನೀಡಲು ಒಪ್ಪಿಕೊಂಡರು.

                ನಂತರ ಮಂತ್ರವಾದಿಗಳು ಕುಟುಂಬದ ವಿಶ್ವಾಸ ಗಳಿಸಲು ಕೆಲವು ಧಾರ್ಮಿಕ ಚಟುವಟಿಕೆಗಳನ್ನು ನಡೆಸಿದರು. ಬಳಿಕ ಕುಟುಂಬದಿಂದ 20 ಲಕ್ಷ ಹಣ ವಸೂಲಿ ಮಾಡಿದರು. ಇದಾದ ಕೆಲವು ದಿನಗಳ ನಂತರ ಮತ್ತೆ ನಡೆಸಬೇಕಾದ ಹೆಚ್ಚುವರಿ ಧಾರ್ಮಿಕ ಕ್ರಿಯೆಗಳಿಗೆ ಮತ್ತೊಮ್ಮೆ 15 ಲಕ್ಷ ರೂ. ಪಡೆದುಕೊಂಡಿದ್ದಾರೆ. ಅಲ್ಲದೆ, 1.7 ಲಕ್ಷ ರೂ. ಮೌಲ್ಯದ ಬೆಳ್ಳಿಯನ್ನೂ ಕದ್ದೊಯ್ದಿದ್ದಾರೆ ಎನ್ನಲಾಗಿದೆ.

               ಪೂಜೆ ಮಾಡಿದರು ತಮ್ಮ ಸಮಸ್ಯೆಯಲ್ಲಿ ಯಾವುದೇ ಸುಧಾರಣೆಯನ್ನು ಗಮನಿಸದಿದ್ದಾಗ ಮಂತ್ರವಾದಿಗಳ ಮೇಲೆ ಕುಟುಂಬಸ್ಥರಿಗೆ ಅನುಮಾನ ಶುರುವಾಗಿದೆ. ತಕ್ಷಣವೇ ಗುಜರಾತ್‌ನ ಧನೇರಾ ಪೊಲೀಸ್ ಠಾಣೆಯಲ್ಲಿ ಐವರು ಮಂತ್ರವಾದಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಸಾಕ್ಷಿಯಾಗಿ ಧಾರ್ಮಿಕ ವಿಧಾನವನ್ನು ಬಳಸುವ ವಿಡಿಯೋವನ್ನು ಪೊಲೀಸರಿಗೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಂತ್ರವಾದಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries