ಕಾಸರಗೋಡು: ಶ್ರೀ ಧರ್ಮಶಾಸ್ತಾ ಸೇವಾ ಸಂಘ ಕಸರಗೋಡು ವತಿಯಿಂದ 57ನೇ ವರ್ಷದ ಶ್ರೀ ಅಯ್ಯಪ್ಪ ತಿರುವಿಳಕ್ಕ್ ಉತ್ಸವ ಡಿ. 9ರಿಂದ 11ರ ವರೆಗೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಜರುಗಲಿದೆ.
9ರಂದು ಬೆಳಗ್ಗೆ 6ಕ್ಕೆ ಶ್ರೀಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. 8ರಿಂದ ಹರಿನಾರಾಯಣ ಮಯ್ಯ ಅವರ ನೇತೃತ್ವದಲ್ಲಿ ಲಕ್ಷಾರ್ಚನೆ, ವಿವಿಧ ತಂಡಗಳಿಂದ ಭಜನೆ ನಡೆಯುವುದು.10ರಂದು ಬೆಳಗ್ಗೆ 5ಕ್ಕೆ ಗಣಪತಿ ಹೋಮ, ಹರಿನಾಮ ಸಂಕೀರ್ತನೆ, ಸಹಸ್ರನಾಮಾರ್ಚನೆ, ಭಜನೆ, ಮಧ್ಯಾಹ್ನ ಅಲಂಕಾರ ಪೂಜೆ, ವಿವಿಧ ತಂಡಗಳಿಂದ ಭಜನೆ ನಡೆಯುವುದು. ಸಂಜೆ 6ಕ್ಕೆ ಕೊರಕ್ಕೋಡು ಶ್ರೀ ಧೂಮವತೀ ದೈವಸ್ಥಾನದಿಂದ ಹೊರಡುವ ಪಾಲಕೊಂಬು ಮೆರವಣಿಗೆ ಎಂಜಿ ರಸ್ತೆ, ನೇತಾಜಿ ರಸ್ತೆ, ಅಶ್ವಿನಿನಗರ, ಕರಂದಕ್ಕಡ್ ಜಂಕ್ಷನ್, ಶಿವಾಜಿ ನಗರ, ಮಠದಪೇಟೆ, ನಾಗರಾಜ ಕಟ್ಟೆದಾರಿಯಾಗಿ ದೇವಸ್ಥಾನ ತಲುಪಲಿದೆ. ರಾತ್ರಿ 10ರಿಂದ ವೀರ ಅಭಿಮನ್ಯು ಯಕ್ಷಗಾನ ಬಯಲಾಟ, ತಾಯಂಬಕ, 11ರಿಂದ ಅಯ್ಯಪ್ಪನ್ ಗೀತೆ, ಬೇಟೆವಿಳಿ, ಕೆಂಡಸೇವೆ, ಪಲ್ಕಿಂಡಿ ಮೆರವಣಿಗೆ, 11ರಂದು ಬೆಳಗ್ಗೆ 5ಕ್ಕೆ ಶ್ರೀ ಅಯ್ಯಪ್ಪನ್-ವಾವರ ಯುದ್ಧ ಸನ್ನಿವೇಶ ನಡೆಯಲಿರುವುದು.
9ರಿಂದ ಕಾಸರಗೋಡು ಶ್ರೀ ಅಯ್ಯಪ್ಪ ತಿರುವಿಳಕ್ಕ್ ಉತ್ಸವ
0
ಡಿಸೆಂಬರ್ 06, 2022