ಕಾಸರಗೋಡು: ಉದುಮ ಮೈಲಾಟಿಯ ಉದುಮ ಟೆಕ್ಸ್‍ಟೈಲ್ಸ್ ಮಿಲ್‍ನ ಸಮಗ್ರ ಅಭಿವೃದ್ಧಿಗಾಗಿ 9.16ಕೋಟಿ ರೂ. ಮೊತ್ತದ ಯೋಜನೆ ಸಿದ್ಧಪಡಿಸಿರುವುದಾಗಿ ರಾಜ್ಯ ಕೈಗಾರಿಕಾ ಖಾತೆ ಸಚಿವ ಪಿ.ರಾಜೀವನ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಉದುಮ ಶಾಸಕ ಸಿ.ಎಚ್. ಕುಞಂಬು ಅವರ ಪ್ರಶ್ನೆಗೆ ಉತ್ತರಿಸಿ ಈ ಮಾಹಿತಿ ನೀಡಿದ್ದಾರೆ.
ಬಟ್ಟೆ ಉತ್ಪನ್ನ ನಿರ್ಮಾಣ ಘಟಕ ಸೇರಿದಂತೆ ಹತ್ತು ವರ್ಷದಲ್ಲಿ ಯೋಜನೆ ಪೂರ್ತಿಗೊಳಿಸಲಾಗುವುದು. 2023ರಲ್ಲಿ 2.36ಕೋಟಿ, 2023-26ರ ಕಾಲಾವಧಿಯಲ್ಲಿ 2.46ಕೋಟಿ, 2026-2030ರ ವರೆಗೆ 4.38ಕೋಟಿ ರೂ. ವೆಚ್ಚದೊಂದಿಗೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ ಕೈಗೊಳ್ಳಲಾಗುವುದು. ಟೆಕ್ಸ್‍ಟೈಲ್ಸ್ ಮಿಲ್‍ನ ಮಾಲಿಕತ್ವದಲ್ಲಿ ಬಾರಗ್ರಾಮದಲ್ಲಿರುವ 22.24 ಎಕರೆ ಜಾಗದಲ್ಲಿ 10 ಎಕರೆಯಲ್ಲಿ ಘಟಕ ಕಾರ್ಯಾಚರಿಸುತ್ತಿದ್ದು, ಉಳಿದ ಸ್ಥಳದಲ್ಲಿ ಮುಂದಿನ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.
ಉದುಮ ಟೆಕ್ಸ್‍ಟೈಲ್ಸ್ ಮಿಲ್‍ನ ಅಭಿವೃದ್ಧಿಗೆ 9.16ಕೋಟಿ ಯೋಜನೆ-ವಿಧಾನಸಭೆಯಲ್ಲಿ ಸಚಿವರ ಭರವಸೆ
0
ಡಿಸೆಂಬರ್ 08, 2022
Tags