ಕೊಚ್ಚಿ: ಯಾವುದೇ ಲೆಕ್ಕಾಚಾರಗಳಿಲ್ಲದೆ ವ್ಯಕ್ತಿಗಳನ್ನು ವೈಯಕ್ತಿಕ ಸಿಬ್ಬಂದಿಯನ್ನಾಗಿ ನೇಮಿಸುವುದು ಸೂಕ್ತವಲ್ಲ. ನೇಮಕಾತಿಗೆ ಮಿತಿ ನಿಗದಿಪಡಿಸಲು ಹೈಕೋರ್ಟ್ ಸೂಚಿಸಿದೆ.
ವೈಯಕ್ತಿಕ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‍ನ ಈ ಹೇಳಿಕೆ ನೀಡಿದೆ.
ವೈಯಕ್ತಿಕ ಸಿಬ್ಬಂದಿ ನೇಮಕ ಸರ್ಕಾರದ ನೀತಿ ನಿರ್ಧಾರವಾಗಿದೆ. ಆದರೆ ಇದನ್ನು ನಿಯಂತ್ರಿಸಬೇಕು. ಈ ಮಿತಿಯನ್ನು ಮುಖ್ಯಮಂತ್ರಿ, ಮುಖ್ಯ ಸಚೇತಕ ಹಾಗೂ ವಿರೋಧ ಪಕ್ಷದ ನಾಯಕರಿಗೆ ಅನ್ವಯಿಸಬೇಕು ಎಮದು ನ್ಯಾಯಾಲಯ ತಿಳಿಸಿದೆ.
ನೇಮಕಾತಿಯ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು. ಇಷ್ಟು ಮಂದಿಯನ್ನು ವೈಯಕ್ತಿಕ ಸಿಬ್ಬಂದಿಯನ್ನಾಗಿ ನೇಮಿಸಿಕೊಳ್ಳುವುದು ಸೂಕ್ತವಲ್ಲ ಎಂದೂ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಅರ್ಜಿಯನ್ನು ಕೊಚ್ಚಿಯಲ್ಲಿ ಭ್ರμÁ್ಟಚಾರ ವಿರೋಧಿ ಜನಾಂದೋಲನವು ಸಲ್ಲಿಸಿದ್ದು, ನ್ಯಾಯಮೂರ್ತಿ ವಿ.ಜಿ. ಅರುಣ್ ಮತ್ತು ನ್ಯಾಯಮೂರ್ತಿ ಮುರಳಿ ಪುರುμÉೂೀತ್ತಮನ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಯಾವುದೇ ಲೆಕ್ಕಪತ್ರವಿಲ್ಲದೆ ವೈಯಕ್ತಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಸೂಕ್ತವಲ್ಲ; ಮಿತಿ ನಿಗದಿಗೆ ಹೈಕೋರ್ಟ್ ಸೂಚನೆ
0
ಡಿಸೆಂಬರ್ 01, 2022