ಪೆರ್ಲ: ಸಿ.ಪಿ.ಐ ಪಕ್ಷದ ಹಿರಿಯ ನೇತಾರ,ದೀರ್ಘ ಕಾಲ ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯರೂ,ಸಮಾಜ ಸೇವಕರೂ ಆದ ದಿ. ಎಂ.ಕೆ ಬಾಲಕೃಷ್ಣರವರ ಏಳನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ವಿವಿಧ ಕಡೆಗಳಲ್ಲಿ ನಡೆಯಿತು. ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಸ್ವರ್ಗ, ಸಿ.ಪಿ.ಐ ವಾಣೀನಗರ ಬ್ರಾಂಚ್ ಸಮಿತಿ ವತಿಯಿಂದ ವಾಣೀನಗರದಲ್ಲಿ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಎಸ್.ಬಿ ನರಸಿಂಹ ಪೂಜಾರಿ, ರಾಮಚಂದ್ರ ಎಂ,ಗ್ರಂಥಾಲಯದ ಅಧ್ಯಕ್ಷ ರವಿರಾಜ್ ,ಚಂದ್ರಾವತಿ ಎಂ,ಮಹೇಶ್ ಕೆ ,ರವಿ ವಾಣೀನಗರ ಮೊದಲಾದವರು ಭಾಗವಹಿಸಿದರು.
ಸ್ವರ್ಗ: ಎಂ.ಕೆ ಬಾಲಕೃಷ್ಣ ಸಂಸ್ಮರಣಾ ಕಾರ್ಯಕ್ರಮ
0
ಡಿಸೆಂಬರ್ 30, 2022